Select Your Language

Notifications

webdunia
webdunia
webdunia
Thursday, 3 April 2025
webdunia

ದೇವಸ್ಥಾನದಲ್ಲಿ ಮಾಡಿದ ಪ್ರಸಾದ ಸೇವಿಸಿ ಮೂವರು ದುರ್ಮರಣ, ಹಲವು ಮಂದಿ ಅಸ್ವಸ್ಥ

Food Poisomimg

Sampriya

ತುಮಕೂರು , ಮಂಗಳವಾರ, 27 ಆಗಸ್ಟ್ 2024 (15:32 IST)
ತುಮಕೂರು: ದೇವಸ್ಥಾನದಲ್ಲಿ ಗ್ರಾಮಸ್ಥರಿಗೆ ಮಾಡಿದ್ದ ಪ್ರಸಾದ ಸೇವಿಸಿ ಮೂವರು ಸಾವನ್ನಪ್ಪಿರುವ ದುರಂತ ಮಧುಗಿರಿ ತಾಲ್ಲೂಕಿನ ಬುಳಸಂದ್ರ ಗ್ರಾಮದಲ್ಲಿ ನಡೆದಿದೆ.

ಶ್ರಾವಣ ಶನಿವಾರ ಹಿನ್ನೆಲೆ ಗ್ರಾಮದಲ್ಲಿ ಮುತ್ತರಾಯಸ್ವಾಮಿ, ಕರಿಯಮ್ಮ ಭೂತಪ್ಪ ದೇವರ ಆರತಿ ಉತ್ಸವ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಜನರಿಗೆ ಪ್ರಸಾದವನ್ನು ಹಂಚಲಾಯಿತು. ಇದನ್ನು ಸೇವಿಸಿದವರಿಗೆ ವಾಂತಿ ಭೇದಿ ಶುರುವಾಗಿ ಮೂವರು ಸಾವನ್ನಪ್ಪಿದರೆ, ಹನ್ನೊಂದಕ್ಕೂ ಹೆಜ್ಜು ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತರನ್ನು ಗ್ರಾಮದ 40ವರ್ಷದ ತಿಪ್ಪಮ್ಮ, 85ವರ್ಷದ ತಿಮ್ಮಕ್ಕ, 75 ವರ್ಷದ ಗಿರಿಯಮ್ಮ ಎಂದು ಗುರುತಿಸಲಾಗಿದೆ.

ಸದ್ಯ ಗ್ರಾಮಕ್ಕೆ ಎ.ಸಿ ತಹಶಿಲ್ದಾರ್, ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಅಸ್ವಸ್ಥಗೊಂಡ 6 ಜನರಿಗೆ ಮಧುಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇನ್ನು ಮುಂಜಾಗ್ರತಾ ಕ್ರಮವಾಗಿ ಲಕ್ಷಣ ಕಾಣಿಸಿಕೊಂಡವರಿಗೆ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಬಕಾರಿ ನೀತಿ ಹಗರಣ: 5 ತಿಂಗಳ ಸೆರೆವಾಸದ ಬಳಿಕ ಜಾಮೀನು ಪಡೆದ ಬಿಆರ್‌ಎಸ್ ನಾಯಕಿ ಕವಿತಾ