Select Your Language

Notifications

webdunia
webdunia
webdunia
webdunia

ಮಳೆಗಾಲದಲ್ಲಿ ಪಾದದ ರಕ್ಷಣೆ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್

ಮಳೆಗಾಲದಲ್ಲಿ ಪಾದದ ರಕ್ಷಣೆ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್
ಬೆಂಗಳೂರು , ಮಂಗಳವಾರ, 31 ಆಗಸ್ಟ್ 2021 (08:03 IST)
Monsoon: ಮಳೆಗಾಲದಲ್ಲಿ ಸಾಮಾನ್ಯವಾಗಿ ಒಂದೆಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ತೇವಾಂಶವಿರುವ ಕಾರಣ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ,  ಮಳೆಗಾಲದಲ್ಲಿ ನಿಮ್ಮ  ಪಾದಗಳ ಆರೋಗ್ಯ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಅದಕ್ಕೆ ವಿಶೇಷವಾದ ಕಾಳಜಿ ಮತ್ತು  ಆರೈಕೆ ಅಗತ್ಯ. ಇಲ್ಲವಾದರೆ ಪಾದಗಳನ್ನು ರಕ್ಷಣೆ ಮಾಡುವುದು ಕಷ್ಟವಾಗುತ್ತದೆ. ನೀವು ನಿಮ್ಮ ಪಾದಗಳು ಆರೋಗ್ಯವಾಗಿ ಹಾಗೂ ಸುಂದರವಾಗಿ ಇಡಲು ಏನು ಮಾಡಬೇಕು ಎಂಬುದು ಇಲ್ಲಿದೆ.
ಧೂಳಿಗೆ ಅಂದರೆ ಹೊರಗೆ  ಹೋಗಿ ಬಂದ ನಂತರ ಪಾದಗಳನ್ನು ಸ್ವಚ್ಛವಾಗಿ ತೊಳೆದು, ಒಣಗಿಸಿಸುವ ಅಭ್ಯಾಸ ಮಾಡಿಕೊಳ್ಳಿ. ಕೊಳೆಯಿಂದ ಕೂಡಿದ ನೀರು ಅಥವಾ ತೇವಾಂಶ ಪಾದಗಳಲ್ಲಿಯೇ ಉಳಿದುಕೊಂಡಿದ್ದರೆ ಫಂಗಸ್ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.ಇದು ನಿಮಗೆ ಪಾದಗಳಲ್ಲಿ ಗುಳ್ಳೆ, ಉರಿ ಮತ್ತು ತುರಿಕೆಗೆ ಕಾರಣವಾಗುತ್ತದೆ. ಅಲ್ಲದೇ ಪಾದವನ್ನು ತೊಳೆದ ನಂತರ ಮೊಯ್ಚುರೈಸರ್ ಹಚ್ಚುವ ಅಭ್ಯಾಸ ಮಾಡಿಕೊಳ್ಳಿ.
ಪಾದಗಳನ್ನು ಆರೋಗ್ಯಕರವಾಗಿ ಇಡಲು ವಾರಕ್ಕೊಮ್ಮೆ ಫೀಟ್ ಪ್ಯಾಕ್ಗಳನ್ನು ಹಚ್ಚಿ, ಇದು ನಿಮ್ಮ ಪಾದದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಮನೆಯಲ್ಲಿ ತಯಾರಿಸಿದ ಅರಿಶಿನ ಮತ್ತು ಕಡಲೇ ಹಿಟ್ಟಿನ ಪ್ಯಾಕ್ಗಳನ್ನು ಬಳಕೆ ಮಾಡುವುದು ಉತ್ತಮ ಪರಿಹಾರ ನೀಡುತ್ತದೆ.
ಮಳೆಗಾಲದಲ್ಲಿ ಆದಷ್ಟು ಗಾಳಿಯಾಡುವಂತಹ ಪಾದರಕ್ಷೆಯನ್ನು ಧರಿಸುವುದು ಒಳ್ಳೆಯದು.  ನೀವು ಧರಿಸುವ ಪಾದರಕ್ಷೆ ನಿಮ್ಮ ಪಾದದ ಆರೋಗ್ಯವನ್ನು ನಿರ್ಧರಿಸುತ್ತದೆ. ಇಲ್ಲವಾದರೆ ಬೆವರು, ನೀರು ಮತ್ತು ಕೊಳೆ ಎಲ್ಲವೂ ಪಾದಗಳಲ್ಲಿ ಸೇರಿಕೊಂಡು, ಸೋಂಕು ಸೇರಿದಂತೆ ಇತರ  ಚರ್ಮದ  ಸಮಸ್ಯೆಗಳು ಉಂಟಾಗುತ್ತದೆ. ಒದ್ದೆಯಾದ ಸಾಕ್ಸ್ ಅಥವಾ ಶೂಗಳನ್ನು  ಹೆಚ್ಚು ಸಮಯದವರೆಗೆ ಧರಿಸಬೇಡಿ. ನಿಮ್ಮ ಪಾದ ಹೆಚ್ಚು ತೇವಾಂಶದಿಂದ ಕೂಡಿದ್ದರೆ ಶೀತ, ಜ್ವರದಂತಹ ಬೇರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ನೀವು ಪ್ರತಿ ಬಾರಿ ಉಗುರಿನ ಬಗ್ಗೆ ಕಾಳಜಿವಹಿಸುವುದು ಕಷ್ಟವಾಗುತ್ತದೆ ಎಂದಾದರೇ, ನೀವು ಉಗುರು ತೆಗೆಯುವಾಗ ನಿಮ್ಮ ಉಗುರನ್ನು ಸ್ವಚ್ಛ ಮಾಡಿ. ಇಲ್ಲದಿದ್ದಲ್ಲಿ ಉಗುರಿನ ಸಂಧಿಯಲ್ಲಿ ಕೊಳೆಗಳು ಸೇರುತ್ತದೆ.  ಅಲ್ಲದೇ ನಿಮ್ಮ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ, ಆದರೆ ಚರ್ಮಕ್ಕೆ ತಗುಲಬಾರದು. ಚರ್ಮದ ಹತ್ತಿರಕ್ಕೆ ಕತ್ತರಿಸುವುದು ಉಗುರು ಸುತ್ತು ಸೇರಿದಂತೆ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮಳೆಗಾಲದಲ್ಲಿ ತೇವಾಂಶವಿರುವ ಕಾರಣ , ಪಾದಗಳನ್ನು ಒಣಗಿಸಿಕೊಳ್ಳುವುದು ಮುಖ್ಯವಾಗುತ್ತದೆ. ನೀವು ಸ್ನಾನದ ನಂತರ ಪಾದಗಳನ್ನು ಸ್ವಚ್ಛವಾಗಿ ಒಣಗಿಸಿ ನಂತರ ಪಾದದ ಕ್ರೀಮ್ಗಳನ್ನು ಹಚ್ಚಿ. ಅತಿಯಾಗಿ ಬೆವರುತ್ತೀರಿ ಅಥವಾ ನೀರಿನಲ್ಲಿ ಪದೇ ಪದೇ ಓಡಾಡುವ ಸಂದರ್ಭ ಬರುತ್ತದೆ ಎಂದಾದರೆ ಪಾದಗಳನ್ನು ಒಣಗಿಸಿ ಬಳಿಕ ಪೌಡರ್ಗಳನ್ನು ಹಚ್ಚಬೇಕು.  ನೀವು ಶೀತ ಸ್ವಭಾವದವರಾಗಿದ್ದರೆ ಸಾಕ್ಸ್ ಹಾಕುವುದನ್ನ ಅಭ್ಯಾಸ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆಯ ಸಮಸ್ಯೆಗಳಿಗೆ ವೀಳ್ಯದೆಲೆಯಲ್ಲಿದೆ ಪರಿಹಾರ