Select Your Language

Notifications

webdunia
webdunia
webdunia
webdunia

ಬಾದಾಮಿ ಹೀಗೆ ಸೇವಿಸಿ ಆರೋಗ್ಯ ಲಾಭ ಪಡೆಯಿರಿ

ಬಾದಾಮಿ ಹೀಗೆ ಸೇವಿಸಿ ಆರೋಗ್ಯ ಲಾಭ ಪಡೆಯಿರಿ
ಬೆಂಗಳೂರು , ಸೋಮವಾರ, 30 ಆಗಸ್ಟ್ 2021 (15:10 IST)
ಬಾದಾಮಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ ಬುದ್ದಿ ಚುರುಕುಗೊಳಿಸುತ್ತದೆ. ಆದ್ರೆ ಬಾದಾಮಿ ಸೇವನೆ ಮಾಡುವ ಮೊದಲು ಸೇವನೆ ವಿಧಾನ ತಿಳಿದಿದ್ದರೆ ಒಳ್ಳೆಯದು. ಕೆಲವರು ಬಾದಾಮಿಯನ್ನು ಸಿಪ್ಪೆ ಸಮೇತ ತಿಂದ್ರೆ ಒಳ್ಳೆಯದು ಎನ್ನುತ್ತಾರೆ. ಮತ್ತೆ ಕೆಲವರು ಬಾದಾಮಿಯನ್ನು ನೆನೆಹಾಕಿ ಸಿಪ್ಪೆ ತೆಗೆದು ಸೇವನೆ ಮಾಡಬೇಕು ಎನ್ನುತ್ತಾರೆ.

ಬಾದಾಮಿಯಲ್ಲಿ ಸಾಕಷ್ಟು ವಿಟಮಿನ್ ಹಾಗೂ ಮಿನರಲ್ಸ್ ಇರುತ್ತದೆ. ವಿಟಮಿನ್ ಇ, ಕ್ಯಾಲ್ಸಿಯಂ, ಮ್ಯಾಗ್ನಿಶಿಯಮ್, ಒಮೆಗಾ-3 ಕೊಬ್ಬಿನಾಮ್ಲ ಇದ್ರಲ್ಲಿರುತ್ತದೆ. ಬಾದಾಮಿ ಸಿಪ್ಪೆಯಲ್ಲಿ ಟ್ಯಾನಿಕ್ ಎಂಬ ಕಿಣ್ವಗಳಿರುತ್ತದೆ. ಇದು ಬಾದಾಮಿಯ ಎಲ್ಲ ಪೋಷಕಾಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತದೆ. ಹಾಗಾಗಿ ಬಾದಾಮಿಯನ್ನು ಎಂದೂ ಸಿಪ್ಪೆ ಸಮೇತ ಸೇವನೆ ಮಾಡಬಾರದು.
ಬಾದಾಮಿಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆ ಹಾಕಬೇಕು. ಆಗ ಸುಲಭವಾಗಿ ಬಾದಾಮಿ ಸಿಪ್ಪೆಯನ್ನು ತೆಗೆಯಬಹುದು. ಬೆಳಗಿನ ಸಮಯದಲ್ಲಿ ಬಾದಾಮಿ ಸೇವನೆ ಒಳ್ಳೆಯದು. ಬಾದಾಮಿ ಹಸಿವನ್ನು ತಡೆ ಹಿಡಿಯುವ ಕೆಲಸ ಮಾಡುತ್ತದೆ. ಹಾಗಾಗಿ ತೂಕ ಹೆಚ್ಚಾಗದಂತೆ ತಡೆಯುತ್ತದೆ. ಹೃದಯಕ್ಕೆ ಬಾದಾಮಿ ಒಳ್ಳೆಯದು. ಗರ್ಭಿಣಿಯರು ಇದ್ರ ಸೇವನೆ ಮಾಡಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ರುಚಿ ಕಹಿಯಾಗಿದ್ದರೂ ಆರೋಗ್ಯ ಸುಧಾರಿಸುವ ಉತ್ತಮ ಮಾರ್ಗ ಹಾಗಲಕಾಯಿ ಜ್ಯೂಸ್