Publish Date: Sat, 15 Aug 2020 (07:28 IST)
Updated Date: Sat, 15 Aug 2020 (07:29 IST)
ಬೆಂಗಳೂರು : ಕ್ಯಾರೆಟ್ ಆರೋಗ್ಯಕರವಾದ ಒಂದ ತರಕಾರಿ. ಇದು ಮಕ್ಕಳಿಗೆ ಉತ್ತಮವಾಗಿರುವುದರಿಂದ ಕ್ಯಾರೆಟ್ ಅನ್ನ ತಯಾರಿಸಿ ಕೊಡಿ.
ಬೇಕಾಗುವ ಸಾಮಾಗ್ರಿಗಳು : 1 ಕಪ್ ಅಕ್ಕಿ, 2 ಚಮಚ ಎಣ್ಣೆ, 1 ಚಮಚ ಸಾಸಿವೆ, ½ ಚಮಚ ಚನ್ನಾ ದಾಲ್, 1 ಚಮಚ ಉದ್ದಿನ ಬೇಳೆ, 1 ಕಪ್ ಕ್ಯಾರೆಟ್ ತುರಿ, ಕರಿಬೇವು, ಉಪ್ಪು, 1 ಕಪ್ ಬಟಾಣಿ.
ಮಾಡುವ ವಿಧಾನ : ಮೊದಲಿಗೆ ಅಕ್ಕಿಯನ್ನು ಬೇಯಿಸಿಟ್ಟುಕೊಳ್ಳಿ, ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಚನ್ನಾದಾಲ್, ಉದ್ದಿನ ಬೇಳೆ ಸೇರಿಸಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ. ಬಳಿಕ ಕರಿಬೇವು, ಕ್ಯಾರೆಟ್, ಬಟಾಣಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿ. ಬಳಿಕ ಅದಕ್ಕೆ ಬೇಯಿಸಿದ ಅಕ್ಕಿಯನ್ನು ಮಿಶ್ರಣ ಮಾಡಿದರೆ ಕ್ಯಾರೆಟ್ ಅನ್ನ ಸವಿಯಲು ಸಿದ್ಧ.
pavithra
Publish Date: Sat, 15 Aug 2020 (07:28 IST)
Updated Date: Sat, 15 Aug 2020 (07:29 IST)