Select Your Language

Notifications

webdunia
webdunia
webdunia
webdunia

ಮೊಟ್ಟೆಯ ಹಳದಿ ಲೋಳೆಯಿಂದ ಆರೋಗ್ಯಕ್ಕೆ ಈ ಮ್ಯಾಜಿಕ್ ಗ್ಯಾರಂಟಿ

egg

Krishnaveni K

ಬೆಂಗಳೂರು , ಶುಕ್ರವಾರ, 15 ಮಾರ್ಚ್ 2024 (09:08 IST)
Photo Courtesy: Twitter
ಬೆಂಗಳೂರು: ದಿನಕ್ಕೊಂದು ಮೊಟ್ಟೆ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅನೇಕ ಆರೋಗ್ಯಕರ ಲಾಭಗಳು ಸಿಗುತ್ತವೆ. ಅದರಲ್ಲೂ ಮೊಟ್ಟೆಯ ಹಳದಿ ಲೋಳೆಯಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಬಹುತೇಕ ಮಂದಿಗೆ ಮೊಟ್ಟೆ ಎಂದರೆ ಇಷ್ಟ. ಡಯಟ್ ಮಾಡುವವರೂ ಮೊಟ್ಟೆಯನ್ನು ಧಾರಾಳವಾಗಿ ಸೇವಿಸಬಹುದು. ಸಾಮಾನ್ಯವಾಗಿ ಎಲ್ಲರೂ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಇಷ್ಟಪಡುತ್ತಾರೆ. ಅದರ ಹಳದಿ ಲೋಳೆಯನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇದರಲ್ಲಿ ನಮ್ಮ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆ.

ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಎ ಅಂಶ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ನಮ್ಮ  ದೃಷ್ಟಿ ಸಮಸ್ಯೆಗಳು ನಿವಾರಣೆಯಾಗುತ್ತದೆ. ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದಲ್ಲದೆ ಹಳದಿ ಲೋಳೆ ವಿಟಮಿನ್ ಡಿ ಅಂಶವನ್ನು ಹೊಂದಿದೆ. ಇದರಿಂದ ನಮ್ಮ ಎಲುಬುಗಳು ಆರೋಗ್ಯವಂತವಾಗುತ್ತದೆ. ಮೂಳೆ ಮುರಿತ ಇತ್ಯಾದಿ ಸಮಸ್ಯೆಯಾಗಿದ್ದರೆ ತಪ್ಪದೇ ಹಳದಿ ಲೋಳೆಯನ್ನು ಸೇವಿಸಿ.

ಇದರಲ್ಲಿ ವಿಟಮಿನ್ ಇ ಅಂಶವೂ ಹೇರಳವಾಗಿದ್ದು ಇದರಿಂದ ಹೃದಯದ ರಕ್ತನಾಳಗಳು ಆರೋಗ್ಯಯುತವಾಗುತ್ತದೆ. ಅಲ್ಲದೆ ದೀರ್ಘ ಕಾಲದ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗದಂತೆ ಕಾಪಾಡುತ್ತದೆ. ಅಲ್ಲದೆ, ಚರ್ಮ ಸಂರಕ್ಷಣೆಗೂ ಇದು ಅತ್ಯಂತ ಉಪಯುಕ್ತವಾಗಿದೆ. ಹೀಗಾಗಿ ಮುಂದಿನ ಸಲ ಹಳದಿ ಲೋಳೆಯನ್ನು ಬಿಸಾಕುವ ಮೊದಲು ಪ್ರಯೋಜನಗಳ ಬಗ್ಗೆ ಯೋಚಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗ ಮಾಡುವ ಮೊದಲು ನೀರು, ಆಹಾರ ಸೇವಿಸಬಹುದೇ