Publish Date: Sun, 21 Oct 2018 (09:47 IST)
Updated Date: Sun, 21 Oct 2018 (09:49 IST)
ಬೆಂಗಳೂರು: ಪ್ರತಿನಿತ್ಯ ವಾಕಿಂಗ್ ಮಾಡಿದರೂ ತೂಕ ಕಳೆದುಕೊಳ್ಳುತ್ತಿಲ್ಲ ಎಂಬ ಚಿಂತೆಯೇ? ಹಾಗಿದ್ದರೆ ಅದಕ್ಕೆ ಕೆಲವು ಕಾರಣಗಳಿವೆ.
ಅಂತರ
ಪ್ರತಿನಿತ್ಯ ವಾಕಿಂಗ್ ಮಾಡುವುದೇನೋ ಸರಿ. ಆದರೆ ಎಷ್ಟು ದೂರ ನಡೆಯುತ್ತೀರಿ ಎಂಬುದು ಮುಖ್ಯ. ಕನಿಷ್ಠ 30 ನಿಮಿಷ ವಾಕಿಂಗ್ ಮಾಡಿದರೆ ಉತ್ತಮ
ವೇಗ
ಎಷ್ಟು ವೇಗವಾಗಿ ನಡೆಯುತ್ತೀರಿ ಎನ್ನುವುದೂ ಮುಖ್ಯ. ಕನಿಷ್ಠ 10 ಸೆಕೆಂಡುಗಳಲ್ಲಿ 30 ಹೆಜ್ಜೆ ಇಡುವಷ್ಟು ನಿಮ್ಮ ವಾಕಿಂಗ್ ವೇಗವಾಗಿರಲಿ.
ದಾರಿ
ಎಂತಹ ದಾರಿಯಲ್ಲಿ ವಾಕಿಂಗ್ ಮಾಡುತ್ತೀರಿ ಎನ್ನುವುದು ಗಮನಿಸಬೇಕು. ಹಳ್ಳ ಗುಡ್ಡಗಳ ಹಾದಿಯಲ್ಲಿ ನಡೆದಾಡಿದಷ್ಟು ನಿಮ್ಮ ದೇಹಕ್ಕೆ ಚಟುವಟಿಕೆ ಹೆಚ್ಚು ಸಿಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.