Publish Date: Sat, 20 Oct 2018 (09:40 IST)
Updated Date: Sat, 20 Oct 2018 (09:41 IST)
ಬೆಂಗಳೂರು: ಭಾವಜೀವಿಗಳು ಹೆಚ್ಚು ಖರ್ಚು ಮಾಡಲ್ವಂತೆ. ಅದೇ ಭಾವನಾತ್ಮಕವಾಗಿ ಸ್ಟ್ರಾಂಗ್ ಇರುವ ವ್ಯಕ್ತಿಗಳು ಖರ್ಚು ಮಾಡುವುದು ಹೆಚ್ಚು ಎಂದು ಅಧ್ಯಯನವೊಂದು ಹೇಳಿದೆ.
ಅಧ್ಯಯನವೊಂದರ ಪ್ರಕಾರ ಹೆಚ್ಚು ಭಾವುಕರಲ್ಲದ ವ್ಯಕ್ತಿಗಳು ಹೆಚ್ಚು ಖರ್ಚು ಮಾಡುತ್ತಾರೆ. ಇವರು ಭವಿಷ್ಯದ ಉಳಿತಾಯದ ಬಗ್ಗೆ ಹೆಚ್ಚು ಚಿಂತೆ ಮಾಡಲ್ಲವಂತೆ.
ಸುಮಾರು 2 ಮಿಲಿಯನ್ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಿ ಅಧ್ಯಯನಕಾರರು ಇಂತಹ ತೀರ್ಮಾನಕ್ಕೆ ಬಂದಿದ್ದಾರೆ. ರಜಾ ದಿನಗಳಲ್ಲಿ, ಹಬ್ಬ, ಹರಿದಿನಗಳಲ್ಲಿ ಭಾವನಾತ್ಮಕವಾಗಿ ಯೋಚನೆ ಮಾಡುವವರು ಖರ್ಚು ಮಾಡುವ ಮೊದಲು ಯೋಚನೆ ಮಾಡುತ್ತಾರೆ. ಆದರೆ ಪ್ರಾಕ್ಟಿಕಲ್ ಆಗಿ ಇರುವ ವ್ಯಕ್ತಿಗಳು ಹಿಂದೆ ಮುಂದೆ ನೋಡದೇ ವೆಚ್ಚ ಮಾಡುತ್ತಾರೆ ಎನ್ನುವುದು ಸಮೀಕ್ಷೆಯಿಂದ ತಿಳಿದುಬಂದ ಅಂಶ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.