Publish Date: Fri, 19 Oct 2018 (09:21 IST)
Updated Date: Fri, 19 Oct 2018 (09:22 IST)
ಬೆಂಗಳೂರು: ಗರ್ಭಪಾತ ಎನ್ನುವುದು ಮಹಿಳೆಯರಿಗೆ ದೈಹಿಕ ಮಾತ್ರವಲ್ಲದೆ, ಮಾನಸಿಕ ಆಘಾತ ಉಂಟುಮಾಡುವ ಸಮಸ್ಯೆ. ಇದರ ಲಕ್ಷಣಗಳು ಹೇಗಿರುತ್ತವೆ?
ರಕ್ತಸ್ರಾವ
ಆರಂಭಿಕ ಹಂತದಲ್ಲಿ ಕೆಲವೊಮ್ಮೆ ಗರ್ಭಿಣಿಯೇ ಎಂದು ಖಚಿತಪಡಿಸಿಕೊಳ‍್ಳುವ ಮೊದಲು ರಕ್ತಸ್ರಾವವಾಗುತ್ತಿದ್ದರೆ ಋತುಮತಿಯ ಲಕ್ಷಣಗಳಿರಬಹುದು ಎಂದು ಸುಮ್ಮನಾಗುತ್ತೇವೆ. ಆದರೆ ಇದು ಗರ್ಭಪಾತದ ಲಕ್ಷಣವಾಗಿರಬಹುದು. ರಕ್ತಸ್ರಾವದ ಜತೆಗೆ ತೀವ್ರ ಹೊಟ್ಟೆನೋವೂ ಇರುತ್ತದೆ.
ಗರ್ಭಿಣಿಯ ಲಕ್ಷಣಗಳು ಮಾಯವಾಗುತ್ತದೆ
ಗರ್ಭಿಣಿಯರಿಗೆ ಇರುವ ಸಾಮಾನ್ಯ ಲಕ್ಷಣಗಳಾದ ತಲೆಸುತ್ತು, ವಾಂತಿ, ನಿದ್ರೆ ಬರುವಂತಾಗುವುದು ಇಂತಹ ಲಕ್ಷಣಗಳು ಮಾಯವಾಗುತ್ತಿದ್ದರೆ ಗರ್ಭಪಾತದ ಲಕ್ಷಣಗಳಾಗುವ ಸಾಧ್ಯತೆಗಳಿರುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.