Publish Date: Fri, 19 Oct 2018 (09:18 IST)
Updated Date: Fri, 19 Oct 2018 (09:19 IST)
ಬೆಂಗಳೂರು: ಹೊಟ್ಟೆ ದಪ್ಪಗಾಗಿ ಅಸಹ್ಯವಾಗಿ ಕಾಣುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ನಿಮ್ಮ ಅಡುಗೆ ಮನೆಯಲ್ಲಿರುವ ಏಲಕ್ಕಿ ನಿಮ್ಮ ಸಹಾಯಕ್ಕೆ ಬರಬಹುದು.
ಪ್ರತಿನಿತ್ಯ ಏಲಕ್ಕಿ ನೀರು ಸೇವಿಸುವುದರಿಂದ ಹೊಟ್ಟೆಯ ಸುತ್ತ ಬೊಜ್ಜು ಬೆಳೆಯುವುದು ತಡೆಯಲು, ತೂಕ ಕಳೆದುಕೊಳ್ಳಲು ಸುಲಭವಾಗುತ್ತದೆ.
ಏಲಕ್ಕಿಯಲ್ಲಿ ಜೀರ್ಣಕ್ರಿಯೆಗೆ ಸಹಕರಿಸುವ ಅಂಶ ಹೇರಳವಾಗಿದೆ. ಅಲ್ಲದೆ ಇದರಲ್ಲಿರುವ ಅಂಶ ಕೊಬ್ಬು ಕರಗಿಸುವ ಗುಣ ಹೊಂದಿದೆ. ಹೊಟ್ಟೆಯ ಸುತ್ತ ಬೊಜ್ಜು ಬೆಳೆಯುವುದಕ್ಕೆ ಮುಖ್ಯ ಕಾರಣ ಕೊಬ್ಬು ಸಂಗ್ರಹವಾಗುವುದು. ಅದನ್ನು ಏಲಕ್ಕಿ ನೀರು ತಡೆಗಟ್ಟುವುದರಿಂದ ಸ್ಥೂಲಕಾಯದಿಂದ ತಪ್ಪಿಸಿಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.