Select Your Language

Notifications

webdunia
webdunia
webdunia
webdunia

ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೂಡ ಸೆಕ್ಸ್ ಸುಖವನ್ನು ಆನುಭವಿಸಬಹುದಂತೆ!

ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೂಡ ಸೆಕ್ಸ್ ಸುಖವನ್ನು ಆನುಭವಿಸಬಹುದಂತೆ!
ಬೆಂಗಳೂರು , ಗುರುವಾರ, 29 ಮಾರ್ಚ್ 2018 (05:52 IST)
ಬೆಂಗಳೂರು : ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಉಸಿರಿನ ವೇಗವನ್ನು ಹೆಚ್ಚಿಸುವ ಯಾವುದೇ ಕಾರ್ಯವನ್ನು ಕೈಗೊಳ್ಳಲು ಹಿಂಜರಿಯುತ್ತಾರೆ. ಇದರಲ್ಲಿ ಸಂಗಾತಿಯೊಂದಿಗೆ ಕೊಡುವ ಆತ್ಮೀಯ ಕ್ಷಣಗಳೂ ಒಂದು. ಏಕೆಂದರೆ ಈ ಸಮಯದಲ್ಲಿ ಏರುವ ಉಸಿರಾಟದ ಗತಿ ಅವರ  ಆರೋಗ್ಯವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು ಎಂಬ ಅನುಮಾನ ಇವರಿಗೆ ಕಾಡುತ್ತಿರುತ್ತದೆ.  

 
ಆದರೆ ತಜ್ಞರ ಪ್ರಕಾರ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ತಮ್ಮ ಸಂಗಾತಿಯೊಂದಿಗೆ ಸುಖಕರ ಕ್ಷಣಗಳನ್ನು ಕಳೆಯಬಹುದು ಎಂಬುದಾಗಿ ತಿಳಿಸಿದ್ದಾರೆ

 
*ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ, ಗಂಟಲಲ್ಲಿ ಸಂಗ್ರಹವಾಗಿದ್ದ ಕಫವನ್ನು ಕೆಮ್ಮುವುದರ ಮೂಲಕ ನಿವಾರಿಸಿಕೊಂಡು ಪ್ರಣಯದಲ್ಲಿ ತೊಡಗಿದರೆ ಆ ಸಮಯದಲ್ಲಿ ಉಸಿರಾಟ ಹೆಚ್ಚು ಸರಾಗವಾಗಿರುತ್ತದೆ.

 
*ಮುಂಜಾನೆಯ ಹೊತ್ತಿನ ಕೂಡುವಿಕೆ ಈ ವ್ಯಕ್ತಿಗಳಿಗೆ ಸಲ್ಲದು. ಏಕೆಂದರೆ ರಾತ್ರಿಯ ಸಮಯದಲ್ಲಿ ದೇಹ ಸಾಕಷ್ಟು ಕಫವನ್ನು ಉತ್ಪಾದಿಸಿ ಉಸಿರು ಆಡುವ ನಾಳಗಳ ಒಳಭಾಗದಲ್ಲೆಲ್ಲಾ ಸಂಗ್ರಹಿಸಿ ಉಸಿರಾಟವನ್ನು ಕೊಂಚ ಕಷ್ಟಕರವಾಗಿರಿಸುತ್ತದೆ. ಹಾಗಾಗಿ ಈ ಸಮಯ ನಿಮಗೆ ಸೂಕ್ತವಲ್ಲ. ಬದಲಿಗೆ ನಿದ್ರೆ ಬರುವ ಮುನ್ನಾ ಸಮಯ ಉತ್ತಮವಾಗಿದೆ.

 
*ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಊಟದ ಬಳಿಕ ಕೂಡುವುದು ಅಪಾಯಕರವಾಗಿದೆ. ಊಟದ ಬಳಿಕ ಹೊಟ್ಟೆ ತುಂಬಿರುವ ಕಾರಣ ಶ್ವಾಸಕೋಶ ವಿಸ್ತರಿಸಲು ಕೊಂಚ ಕಡಿಮೆ ಸ್ಥಳಾವಕಾಶ ಪಡೆಯುವ ಕಾರಣ ಕೊಂಚ ಶಕ್ತಿಗುಂದಿರುತ್ತವೆ. ಆದ್ದರಿಂದ ಮಿಲನದ ಬಳಿಕವೇ ಊಟದ ಕಾರ್ಯಕ್ರಮವಿಟ್ಟುಕೊಂಡರೆ ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆವರಿನ ವಾಸನೆಯಿದ ಮುಕ್ತಿ ಪಡೆಯಬೇಕಾ...? ಇಲ್ಲಿದೆ ನೋಡಿ ಟಿಪ್ಸ್