Publish Date: Mon, 26 Mar 2018 (04:56 IST)
Updated Date: Mon, 26 Mar 2018 (04:58 IST)
ಬೆಂಗಳೂರು: ಪ್ರತಿ ನಿತ್ಯ ಹಾಲು ಸೇವಿಸುವುದರಿಂದ ದೇಹಕ್ಕೆ ಕ್ಯಾಲ್ಶಿಯಂ ಸಿಗುತ್ತದೆ ಎಂದೆಲ್ಲಾ ನಾವು ಹೆಚ್ಚಾಗಿ ಎಲ್ಲರೂ ಹೇಳುವುದನ್ನು ಕೇಳುತ್ತೇವೆ. ಆದರೆ ಇದರ ಹೊರತಾಗಿ ಹಾಲಿನ ಉಪಯೋಗ ಏನು ಗೊತ್ತಾ?
ಹೆಚ್ಚಿನವರಿಗೆ ಗೊತ್ತಿರಲ್ಲ. ಹಾಲು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಸಿಗುವುದು ಮಾತ್ರವಲ್ಲ, ಖಿನ್ನತೆ, ಒತ್ತಡಗಳೂ ದೂರವಾಗುತ್ತದಂತೆ. ಇದು ಎಲ್ಲಾ ಚಿಂತೆ ಮರೆತು ದೇಹಕ್ಕೆ ಸುಖ ನಿದ್ರೆ ಕೊಡಲೂ ಸಹಾಯಕ ಅಂತಾರೆ.
ಒಂದು ಗ್ಲಾಸ್ ತಣ್ಣನೆಯ ಹಾಲು ಸೇವಿಸುವುದರಿಂದ ಅಸಿಡಿಟಿಯಂತಹ ಸಮಸ್ಯೆ ದೂರಮಾಡಬಹುದು. ಹಾಲಿಗೆ ಒಂಚೂರು ಸೋಯಾ ಸೇರಿಸಿ ಕುಡಿದರೆ ಫಿಟ್ ಆಗಿರಬಹುದು. ಹಾಗಿದ್ದರೆ ಇನ್ನು ತಡವೇಕೆ? ದಿನಕ್ಕೊಂದು ಲೋಟ ಹಾಲು ತಪ್ಪದೇ ಸೇವಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ