Select Your Language

Notifications

webdunia
webdunia
webdunia
webdunia

ಈ ಎರಡು ಬಣ್ಣದ ಕೋಳಿ ಮೊಟ್ಟೆಗಳಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂದು ತಿಳಿಬೇಕಾ?

ಈ ಎರಡು ಬಣ್ಣದ ಕೋಳಿ ಮೊಟ್ಟೆಗಳಲ್ಲಿ ಯಾವುದು ಆರೋಗ್ಯಕ್ಕೆ  ಉತ್ತಮ ಎಂದು ತಿಳಿಬೇಕಾ?
ಬೆಂಗಳೂರು , ಭಾನುವಾರ, 25 ಮಾರ್ಚ್ 2018 (06:23 IST)
ಬೆಂಗಳೂರು : ಕೋಳಿ ಮೊಟ್ಟೆಯಿಂದ ನಮ್ಮ ದೇಹಕ್ಕೆ ಬೇಕಾದಷ್ಟು ಮುಖ್ಯ ಪೋಷಕಾಂಶಗಳು ಸಿಗುತ್ತವೆ ಎಂದು ಎಲ್ಲರಿಗೂ ಗೊತ್ತು. ಮುಖ್ಯವಾಗಿ ಅವುಗಳಲ್ಲಿ ಇರುವ ಪ್ರೋಟೀನ್, ಕೊಬ್ಬು ನಮಗೆ ಸಾಕಷ್ಟು ಉಪಯುಕ್ತ. ಕೋಳಿ ಮೊಟ್ಟೆಯಲ್ಲಿ ಇರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಗೊಳಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕೆಲವು ಕಡೆ ಗೋಧಿ ಬಣ್ಣ ಹಾಗೂ ಬಿಳಿ ಬಣ್ಣವಿರುವ 2 ರೀತಿಯಾದ ಮೊಟ್ಟೆಗಳು ಸಿಗುತ್ತವೆ. ಆಗ ಆರೋಗ್ಯಕ್ಕೆ ಯಾವ ಮೊಟ್ಟೆ ತಿಂದರೆ ಉತ್ತಮ ಎಂಬ ಗೊಂದಲ ಹಲವರಲ್ಲಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.


ಕೋಳಿಗಳಿಗೆ ನೀಡುವ ಆಹಾರದ ಕಾರಣ ಮೊಟ್ಟೆಯ ಬಣ್ಣ ಬದಲಾಗುತ್ತದೆ. ಗೋಧಿ ಬಣ್ಣದ ಮೊಟ್ಟೆಗಳು ಸಾಮಾನ್ಯ ಮೊಟ್ಟೆಗಿಂತ ಬೆಲೆ ಸ್ವಲ್ಪ ಜಾಸ್ತಿ ಇರುತ್ತವೆ. ಇನ್ನು ಪೋಷಕಾಂಶಗಳ ವಿಚಾರಕ್ಕೆ ಬಂದರೆ ಗೋಧಿ ಬಣ್ಣದ ಮೊಟ್ಟೆಯಲ್ಲೇ ಹೆಚ್ಚಿನ ಪೋಷಕಾಂಶಗಳು ಇರುತ್ತವೆ ಎನ್ನುತ್ತಿದ್ದಾರೆ ಸಂಶೋಧಕರು. ಸಾಮಾನ್ಯ ಮೊಟ್ಟೆಗಿಂತಲೂ ಕೆಲವು ಪಟ್ಟು ಹೆಚ್ಚು ಒಮೆಗಾ 3 ಫ್ಯಾಟಿ ಆಸಿಡ್‌ಗಳು ಗೋಧಿ ಬಣ್ಣದ ಮೊಟ್ಟೆಯಲ್ಲಿ ಇರುತ್ತವೆ. ರುಚಿಯಲ್ಲಿಯೂ ಕೂಡ  ಬಿಳಿಯದಕ್ಕಿಂತ ಗೋಧಿ ಬಣ್ಣದ ಮೊಟ್ಟೆ ಹೆಚ್ಚು ರುಚಿ ನೀಡುತ್ತದೆ. ಆದಕಾರಣ ಬಿಳಿ ಬಣ್ಣಕ್ಕಿಂತ ಗೋಧಿ ಬಣ್ಣದ ಮೊಟ್ಟೆ ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯುಸಿ ಲೈಫ್ ಮಧ್ಯೆ ಸೆಕ್ಸ್ ಗಾಗಿ ಸಮಯ ಒದಗಿಸುವುದು ಹೇಗೆ?