ಬೆಂಗಳೂರು : ಬೇಸಿಗೆಯಲ್ಲಿ ಸೂರ್ಯ ಶಾಖ ಅತಿಯಾಗಿರುತ್ತದೆ. ಇದರಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಹೊರಗಡೆ ಹೋದಾಗ ಸೂರ್ಯನ ಶಾಖವನ್ನು ತಡೆಯಲು ಆಗುವುದಿಲ್ಲ. ನೀರಿನಾಂಶ ಕಡಿಮೆಯಾಗಿ ಜ್ವರ, ತಲೆಸುತ್ತು, ಅತಿಸಾರ, ಉಸಿರಾಟದ ಸಮಸ್ಯೆ ಕಾಡುತ್ತದೆ. ಹಾಗಾಗಿ ಅದಕ್ಕಾಗಿ ಇವುಗಳನ್ನು ಸೇವಿಸಿ.
*ಮಜ್ಜಿಗೆ ಅಥವಾ ಮೊಸರು : ಇವುಗಳಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಬೇಸಿಗೆಯ ಬೇಗೆ ತಣಿಸಲು ಕಪ್ಪು ಉಪ್ಪನ್ನು ಬೆರೆಸಿ ಸೇವಿಸಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.
*ಈರುಳ್ಳಿ ರಸ : ಇದು ದೇಹದ ಉಷ್ಣಾಂಶವನ್ನು ಕಡಿಮೆಮಾಡುತ್ತದೆ. ಹಾಗಾಗಿ ಹೊರಗಡೆ ಹೋಗುವಾಗ ಈರುಳ್ಳಿ ರಸವನ್ನು ಕುಡಿಯಿರಿ.
*ಹೆಸರುಬೇಳೆ ಸೂಪ್ : ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದು ಶಾಖದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆಸರು ಬೇಳೆಯನ್ನು ನೀರಿನಲ್ಲಿ ಕುದಿಸಿ ಉಪ್ಪು ಮತ್ತು ಪುದೀನ, ನಿಂಬೆ ರಸ ಸೇರಿಸಿ ಕುಡಿಯಿರಿ.
*ಹುಣಸೆ ರಸ : ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹುಣಸೆ ರಸಕ್ಕೆ ಬೆಲ್ಲ ಸೇರಿಸಿ ಕುಡಿಯಿರಿ.