Select Your Language

Notifications

webdunia
webdunia
webdunia
webdunia

ಬೆಳ್ಳಗಿನ ಜಾವ ಬಿಸಿನೀರು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಉಪಾಯಕಾರಿ

ಬೆಳ್ಳಗಿನ ಜಾವ ಬಿಸಿನೀರು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಉಪಾಯಕಾರಿ
ಹೊಸದಿಲ್ಲಿ , ಸೋಮವಾರ, 4 ಅಕ್ಟೋಬರ್ 2021 (08:08 IST)
ನಿಮ್ಮ ಕರುಳಿನ ಆರೋಗ್ಯ ಸುಧಾರಣೆಗೆ ಬಿಸಿ ನೀರು ಸಹಾಯ ಮಾಡುತ್ತದೆ. ಇದು ತೂಕ ತಿಳಿಸಿಕೊಳ್ಳಲು ನೆರವಾಗುತ್ತದೆ.

ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ವಾತಾವರಣದಿಂದ ಉಂಟಾಗುವ ಆರೋಗ್ಯದ ಏರು-ಪೇರಿನಿಂದ ಸುರಕ್ಷಿತವಾಗಿಡಲು ಬಿಸಿ ನೀರು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮೂಗು ಕಟ್ಟುವಿಕೆಯಿಂದ ನಿವಾರಣೆ
ಶೀತದ ಪ್ರಕೃತಿಯಲ್ಲಿ ಮೂಗು ಕಟ್ಟುವುದು ಸಾಮಾನ್ಯ. ಹಾಗಿರುವಾಗ ಉಸಿರಾಟಕ್ಕೆ ಹೆಚ್ಚು ಸಮಸ್ಯೆಯನ್ನುಂಟು ಮಾಡುತ್ತದೆ. ಬಿಸಿ ನೀರು ಸೇವನೆಯಿಂದ ಮೂಗು ಕಟ್ಟುವಿಕೆ ಸಡಿಲಗೊಳ್ಳುತ್ತದೆ. ಇದರಿಂದ ನೀವು ಸುಲಭದಲ್ಲಿ ಉಸಿರಾಟ ಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಅಧ್ಯಯನಗಳಿಂದಲೂ ತಿಳಿದು ಬಂದಿದೆ.
ರಕ್ತ ಪರಿಚಲನೆ
ಬಿಸಿ ನೀರಿನಿಂದ ಸ್ನಾನ ಮಾಡುವುದು ಅಥವಾ ಬಿಸಿ ನೀರು ಕುಡಿಯುವ ಅಭ್ಯಾಸದಿಂದ ರಕ್ತ ಪರಿಚಲನೆಗೆ ಸರಾಗವಾಗುತ್ತದೆ. ಅಪಧಮನಿ ಮತ್ತು ಅಭಿಧಮನಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯಕ. ಹೃದ್ರೋಗಕ್ಕೆ ಸಂಬಂಧಿಸಿದಂತೆ ಯಾವುದೇ ಖಾಯಿಲೆಗಳು ಬಾರದಂತೆ ತಡೆಗಟ್ಟಬಹುದು. ಹಾಗಾಗಿ ಬಿಸಿನೀರು ಸೇವನೆ ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ.
ಹಲ್ಲಿನ ಆರೋಗ್ಯ
webdunia

ಬಿಸಿ ನೀರು ಸೇವನೆ ಹಲ್ಲಿನ ಆರೋಗ್ಯವನ್ನು ಸುಧಾರಿಸುತ್ತದೆ ಜತೆಗೆ ಸ್ವಚ್ಛವಾಗಿರಿಸಿಕೊಳ್ಳಲು ಸಹಾಯಕವಾಗಿದೆ. ತಣ್ಣೀರಿನಿಂದ ಹಲ್ಲು ಉಜ್ಜುವುದು ಸಂವೇದನಾಶೀಲತೆಯನ್ನು ಉಂಟು ಮಾಡಬಹುದು. ದವಡೆಯ ಒಡೆತ ಕಂಡು ಬರುವುದು. ಹಾಗಾಗಿಯೇ ಬಿಸಿ ನೀರಿನಲ್ಲಿ ಹಲ್ಲುಜ್ಜುವ ಅಭ್ಯಾಸವನ್ನು ತಜ್ಞರು ಹೇಳುತ್ತಾರೆ.
ಜೀರ್ಣಕ್ರಿಯೆ
ಬಿಸಿನೀರು ಕರುಳಿನಲ್ಲಿರುವ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೆಳಿಗ್ಗೆ ಬೆಸಿ ನೀರು ಸೇವನೆಯು ದಿನಪೂರ್ತಿ ಚಟುವಟಿಕೆಯಿಂದ ಕೂಡಿಸಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನು ಒಂದು ಲೋಟ ಬಿಸಿ ನೀರು ಕುಡಿದು ಮಲಗುವುದರಿಂದ ರಾತ್ರಿ ಹಸಿವಾಗುವುದನ್ನು ತಪ್ಪಿಸಬಹುದು ಜತೆಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸ್ನಾಯುಗಳಿಗೆ ವಿಶ್ರಾಂತಿ
webdunia

ಬಿಸಿ ನೀರು ಸೇವನೆಯು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಸ್ನಾಯುಗಳು ಬಲಗೊಳ್ಳಲು ಸಹಾಯ ಮಾಡುತ್ತದೆ. ಜತೆಗೆ ಸ್ನಾಯು ಸೆಳೆತ, ಸಂಧಿವಾತದಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.
ಮನಸ್ಸು
ನಿಮ್ಮ ಮನಸ್ಸನ್ನು ಹಿಡಿತದಲ್ಲಿಡಲು ಬಿಸಿನೀರು ಸೇವನೆ ಸಹಾಯಕವಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮನಸ್ಸಿನ ಏಕಾಗ್ರತೆ ಮತ್ತು ನಿಗ್ರಹ ಮನುಷ್ಯನಿಗೆ ಅತ್ಯವಶ್ಯಕ. ಹಾಗಾಗಿ ಬಿಸಿನೀರು ಸೇವಿಸುವದರಿಂದ ಮನಸ್ಸು ಚುರುಕಾಗುತ್ತದೆ ಜತೆಗೆ ಆರೋಗ್ಯವೂ ಸುಧಾರಿಸುತ್ತದೆ.
ಮಲಬದ್ಧತೆಯಿಂದ ನಿವಾರಣೆ
ಬಿಸಿ ನೀರು ಸೇವಿಸುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಇದು ನಿಮ್ಮ ದೇಹವನ್ನು ಸದೃಢವಾಗಿರಿಸಲು ಸಹಾಯಕವಾಗಿದೆ. ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಿಂದ ತಿಂಡ ಆಹಾಯ ಸರಿಯಾಗಿ ಜೀರ್ಣಗೊಳ್ಳುತ್ತದೆ. ಇದರಿಂದ ಮಲಬದ್ಧತೆ, ಹೊಟ್ಟೆ ನೋವಿನ ಸಮಸ್ಯೆಯಿಂದ ದೂರವಿರಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಪ್ರಯೋಜನಗಳನ್ನು ನೀಡುವ ಪುದೀನಾ ಸೇವನೆಯ ಬಗ್ಗೆ ತಿಳಿಯಿರಿ