Publish Date: Tue, 02 Oct 2018 (06:57 IST)
Updated Date: Tue, 02 Oct 2018 (06:59 IST)
ಬೆಂಗಳೂರು: ಬೆಲ್ಲಿ ಫ್ಯಾಟ್ ಅಥವಾ ಹೊಟ್ಟೆ ಸುತ್ತ ಬೊಜ್ಜು ಬೆಳೆಯುವುದು ಹಲವರ ಚಿಂತೆಗೆ ಕಾರಣವಾಗುತ್ತದೆ. ಹಾಗಿದ್ದರೆ ಅದನ್ನು ಕರಗಿಸಲು ಈ ಜ್ಯೂಸ್ ಸಹಾಯ ಮಾಡಬಹುದು.
ಹಾಗಲಕಾಯಿ ಜ್ಯೂಸ್
ಹಾಗಲಕಾಯಿ ರುಚಿಯಲ್ಲಿ ಕಹಿಯಾದರೂ, ಇದು ಕೊಡುವ ಲಾಭ ಮಾತ್ರ ತುಂಬಾ ಸಿಹಿ. ನಿಯಮಿತವಾಗಿ ಹಾಗಲಕಾಯಿ ಜ್ಯೂಸ್ ಕುಡಿಯುತ್ತಿದ್ದರೆ ಬೆಲ್ಲಿ ಫ್ಯಾಟ್ ಕರಗಿಸಬಹುದು.
ನೆಲ್ಲಿಕಾಯಿ ಜ್ಯೂಸ್
ನೆಲ್ಲಿಕಾಯಿ ನಿಮ್ಮ ದೇಹದ ಜೀರ್ಣಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹೀಗಾಗಿ ಬೇಡದ ಕೊಬ್ಬು ನೆಲೆ ನಿಲ್ಲುವ ಛಾನ್ಸೇ ಇಲ್ಲ. ಹೀಗಾಗಿ ಪ್ರತಿ ನಿತ್ಯ ನೆಲ್ಲಿಕಾಯಿ ಜ್ಯೂಸ್ ಸೇವಿಸುತ್ತಿರಿ.
ಸೌತೆಕಾಯಿ ಜ್ಯೂಸ್
ಸೌತೆಕಾಯಿ ಹೊಟ್ಟೆಗೆ ತಂಪು, ಕಡಿಮೆ ಕ್ಯಾಲೋರಿ ಇರುವ ಇದು ದೇಹಕ್ಕೂ ಒಳ್ಳೆಯದು. ತೂಕ ಕಳೆದುಕೊಳ್ಳಲು ಬಯಸುವವರು ಈ ಜ್ಯೂಸ್ ಸೇವಿಸುತ್ತಿದ್ದರೆ ಸಾಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.