Select Your Language

Notifications

webdunia
webdunia
webdunia
webdunia

ರುಚಿಕರವಾದ ಬೇರುಹಲಸಿನ ಬಜೆ

ರುಚಿಕರವಾದ ಬೇರುಹಲಸಿನ ಬಜೆ
ಬೆಂಗಳೂರು , ಸೋಮವಾರ, 1 ಅಕ್ಟೋಬರ್ 2018 (14:53 IST)
ಜೋರಾಗಿ ಮಳೆ ಬಿದ್ದಾಗ ಸಂಜೆಯ ವೇಳೆಯಲ್ಲಿ ಏನಾದರೂ ಬಿಸಿ ಬಿಸಿ ತಿಂದರೆ ಮನಸ್ಸಿಗೆ ನೆಮ್ಮದಿ. ಅದರಲ್ಲಿಯೂ ಮನೆಯಲ್ಲಿಯೇ ಮಾಡಿಕೊಂದು ತಿಂದರೆ ಇನ್ನೂ ರುಚಿ ಜಾಸ್ತಿ. ಚಹದೊಂದಿಗೆ ಒಳ್ಳೆಯ ಕಾಂಬಿನೇಶನ್ ಆಗಿ ಬೇರುಹಲಸಿನಿಂದ ಬಜೆಯನ್ನು ತಯಾರಿಸಿಕೊಂಡು ಸವಿಯಬಹುದು. ತುಂಬಾ ರುಚಿಯಾಗಿರುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..
ಬೇಕಾಗುವ ಸಾಮಗ್ರಿಗಳು :
 
* ಚೆನ್ನಾಗಿ ಬಲಿತಿರುವ ಬೇರು ಹಲಸಿನ ಕಾಯಿ 1/2
* ಕಡಲೆಹಿಟ್ಟು 1.5 ಕಪ್
* ಅಕ್ಕಿ ಹಿಟ್ಟು 1 ಚಮಚ
* ಒಣ ಮೆಣಸಿನ ಪುಡಿ 2 ಚಮಚ
* ಅಡಿಗೆ ಸೋಡಾ ಸ್ವಲ್ಪ
* ಜೀರಿಗೆ ಪುಡಿ 1/2 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಕರಿಯಲು ಎಣ್ಣೆ
webdunia
ತಯಾರಿಸುವ ವಿಧಾನ :
 
ಮೊದಲು ಬೇರು ಹಲಸಿನ ಸಿಪ್ಪೆ ತೆಗೆದು ಅದರ ಮಧ್ಯದ ಗಟ್ಟಿ ಭಾಗವನ್ನು ತೆಳುವಾಗಿ ಹೆಚ್ಚಿಕೊಳ್ಳಬೇಕು. ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಕಡಲೆಹಿಟ್ಟು, ಅಕ್ಕಿ ಹಿಟ್ಟು, ಒಣಮೆಣಸಿನ ಪುಡಿ, ಅಡಿಗೆ ಸೋಡಾ, ಜೀರಿಗೆ ಪುಡಿ ಮತ್ತು ಉಪ್ಪನ್ನು ಹಾಕಿ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಬಜೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ನಂತರ ಹೆಚ್ಚಿದ ಬೇರುಹಲಸನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಬೇಕು. ಇದನ್ನು ಬಿಸಿಬಿಸಿಯಾಗಿ ಟೀ ಅಥವಾ ಕಾಫಿಯ ಜೊತೆ ಸವಿಯಲು ಚೆನ್ನಾಗಿರುತ್ತದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಬೆಡ್ ಮೇಲೆ ಪುರುಷರು ಮಹಿಳೆಗೆ ಹೆಚ್ಚು ಸುಖ ನೀಡಲು ಏನು ಮಾಡಬೇಕು ಗೊತ್ತಾ?