Select Your Language

Notifications

webdunia
webdunia
webdunia
webdunia

ಲೈಂಗಿಕಾಸಕ್ತಿ ಹೆಚ್ಚಬೇಕಾದರೆ ಈ ಅಭ್ಯಾಸಗಳನ್ನು ಬಿಡಿ

ಲೈಂಗಿಕಾಸಕ್ತಿ ಹೆಚ್ಚಬೇಕಾದರೆ ಈ ಅಭ್ಯಾಸಗಳನ್ನು ಬಿಡಿ
ಬೆಂಗಳೂರು , ಭಾನುವಾರ, 30 ಸೆಪ್ಟಂಬರ್ 2018 (09:21 IST)
ಬೆಂಗಳೂರು: ಲೈಂಗಿಕಾಸಕ್ತಿ ಕುಂದಿದೆ ಎಂಬ ಚಿಂತೆಯೇ? ಹಾಗಿದ್ದರೆ ನಿಮ್ಮ ದೈನಂದಿನ ಜೀವನದಲ್ಲಿ ಮಾಡುವ ಈ ತಪ್ಪುಗಳನ್ನು ಕೈಬಿಟ್ಟರೆ ಸಾಕು.

ಡಯಟ್
ಆಹಾರದಲ್ಲಿ ಶಿಸ್ತು, ಸಮತೋಲನ ಎಲ್ಲವೂ ಬೇಕು ನಿಜ. ಆದರೆ ಸರಿಯಾದ ಕ್ರಮದಲ್ಲಿ ಮಾಡದೇ ಇದ್ದರೆ ಅದೂ ಅಪಾಯವೇ. ಅಸಂಬದ್ಧ ಡಯಟ್ ನಿಂದ ದೇಹಕ್ಕೆ ಸರಿಯಾಗಿ ಆಹಾರ ಪೂರೈಕೆಯಾಗದೇ ಲೈಂಗಿಕಾಸಕ್ತಿ ಕುಗ್ಗಲು ಕಾರಣವಾಗಬಹುದು.

ಮದ್ಯಪಾನ
ಮದ್ಯಪಾನದಂತಹ ಮಾದಕ ದ್ರವ್ಯಗಳು ನಮ್ಮ ದೇಹದ ಸಮತೋಲನ ಕಳೆಯುವುದು ಮಾತ್ರವಲ್ಲದೆ, ದೇಹದ ಸಾಮರ್ಥ್ಯ ಕುಗ್ಗಿಸುವುದು. ಲೈಂಗಿಕ ಕ್ರಿಯೆ ಬಗ್ಗೆ ಆಸಕ್ತಿಯಿದ್ದರೂ ಮದ್ಯಪಾನ ಮಾಡಿದರೆ ದೈಹಿಕವಾಗಿ ಶಕ್ತಿಯಲ್ಲದೇ ಸೋತು ಹೋಗುವಿರಿ.

ನಿದ್ರೆ
ಸುಖ ನಿದ್ರೆ ಎಲ್ಲದಕ್ಕೂ ಪರಿಹಾರ. ಸರಿಯಾಗಿ ನಿದ್ರೆಯಿಲ್ಲದೇ ಹೋದರೆ ಮಿಲನ ಕ್ರಿಯೆ ಮಾಡಲು ಆಸಕ್ತಿ ಬರದು. ಸುಸ್ತು ಬಳಲಿಕೆ ಇದ್ದಾಗ ಯಾರಿಗೆ ತಾನೇ ರೊಮ್ಯಾನ್ಸ್ ಗೆ ಮೂಡ್ ಬರುತ್ತೆ?

ಸಕ್ಕರೆ
ಅತಿಯಾಗಿ ಸಕ್ಕರೆ ಬಳಸಿದ ಆಹಾರ ಸೇವನೆ ನಮ್ಮ ದೇಹದಲ್ಲಿ ಲೈಂಗಿಕ ಹಾರ್ಮೋನ್ ಗಳ ಸಾಮರ್ಥ್ಯ ಕುಗ್ಗಿಸುವುದು. ಇದರಿಂದ ಸಹಜವಾಗಿಯೇ ಲೈಂಗಿಕಾಸಕ್ತಿ ಕುಂಠಿತವಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಬೇಗ ಪ್ರೆಗ್ನೆಂಟ್ ಆಗಬೇಕೇ? ಹಾಗಿದ್ದರೆ ಇದನ್ನು ಸೇವಿಸಿ!