Publish Date: Mon, 01 Oct 2018 (08:51 IST)
Updated Date: Mon, 01 Oct 2018 (08:52 IST)
ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ಈಗಾಗಲೇ ತಿಳಿದಿದ್ದೇವೆ. ಆಕ್ಸ್ ಫರ್ಡ್ ವಿವಿ ಸಂಶೋಧಕರು ಈ ಬಗ್ಗೆ ಸಂಶೋಧನೆಯೊಂದನ್ನು ಮಾಡಿದ್ದಾರೆ.
ನಿಯಮಿತವಾಗಿ ಸೆಕ್ಸ್ ಮಾಡುವ ವ್ಯಕ್ತಿಗಳ ಬುದ್ಧಿಮತ್ತೆ ಚುರುಕಾಗುತ್ತದೆ ಎಂದು ಅಧ್ಯಯನವೊಂದನ್ನು ನಡೆಸಿ ಆಕ್ಸ್ ಫರ್ಡ್ ವಿವಿ ತಜ್ಞರು ಪತ್ತೆ ಮಾಡಿದ್ದಾರೆ.
ಸೆಕ್ಸ್ ನಿಮ್ಮನ್ನು ಚುರುಕುಗೊಳಿಸುತ್ತದೆ ಮತ್ತು ನಿಮ್ಮ ಬುದ್ಧಿವಂತಿಕೆ ಹೆಚ್ಚಿಸುತ್ತದೆ. ಹಾಗೆಯೇ ಮತ್ತಷ್ಟು ತೀಕ್ಷ್ಣ ಮತಿಗಳಾಗುತ್ತೀರಿ ಎಂದು ಸಮೀಕ್ಷಕರು ಪತ್ತೆ ಮಾಡಿದ್ದಾರೆ. ಇದು ಮೆದುಳಿನ ಅಂಗಾಂಶಗಳ ಬೆಳವಣಿಗೆ ಚುರುಕುಗೊಳಿಸುತ್ತದಂತೆ. ಅದೇ ಕಾರಣಕ್ಕೆ ನಿಯಮಿತವಾಗಿ ಸೆಕ್ಸ್ ಮಾಡುವವರ ಐಕ್ಯೂ (ಬುದ್ಧಿಮಟ್ಟ) ಚೆನ್ನಾಗಿರುತ್ತದೆ ಎನ್ನುತ್ತಾರೆ ತಜ್ಞರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.