Publish Date: Fri, 07 Jun 2019 (09:10 IST)
Updated Date: Fri, 07 Jun 2019 (09:11 IST)
ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ಒಳ್ಳೆಯದು.
ಅದರಲ್ಲಿ ನಮ್ಮ ಗುಪ್ತಾಂಗದ ಶುಚಿತ್ವವೂ ಒಂದು ಲೈಂಗಿಕ ಕ್ರಿಯೆ ಬಳಿಕ ಪುರುಷ ಮತ್ತು ಮಹಿಳೆ ತಮ್ಮ ಗುಪ್ತಾಂಗವನ್ನು ತೊಳೆದುಕೊಂಡು ಶುಚಿಯಾಗಿಟ್ಟುಕೊಳ್ಳಬೇಕು.
ಯಾಕೆಂದರೆ ರತಿಕ್ರೀಡೆ ಸಂದರ್ಭದಲ್ಲಿ ಸಂಗಾತಿಯ ಗುಪ್ತಾಂಗದಿಂದ ಸೋಂಕು ಹರಡಬಹುದಾದ ಸಾಧ್ಯತೆಯಿರುತ್ತದೆ. ಕೆಲವೊಂದು ಬ್ಯಾಕ್ಟೀರಿಯಾಗಳು ಗುಪ್ತಾಂಗದ ಸಮಸ್ಯೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಕೆಟ್ಟ ವಾಸನೆ, ಅಲರ್ಜಿಯಂತಹ ಸಮಸ್ಯೆಗಳಿಂದ ದೂರವಿರಲಿ ಲೈಂಗಿಕ ಸಂಪರ್ಕ ಬಳಿಕ ಜನನಾಂಗ ಶುಚಿಗೊಳಿಸುವುದು ಉತ್ತಮ