Select Your Language

Notifications

webdunia
webdunia
webdunia
webdunia

ಬೊಜ್ಜಿನ ಸಮಸ್ಯೆ ನಿಮ್ಮನ್ನು ಅರಿಯಾಗಿ ಕಾಡುತ್ತಿದೆಯೇ?

ಬೊಜ್ಜಿನ ಸಮಸ್ಯೆ ನಿಮ್ಮನ್ನು ಅರಿಯಾಗಿ ಕಾಡುತ್ತಿದೆಯೇ?
ಬೆಂಗಳೂರು , ಮಂಗಳವಾರ, 2 ನವೆಂಬರ್ 2021 (10:16 IST)
ನಮ್ಮ ಇತ್ತೀಚಿನ ಜೀವನಶೈಲಿ ಜಂಕ್‍ಫುಡ್‍ಗಳನ್ನು ಅತಿಯಾಗಿ ಸೇವಿಸುವುರಿಂದ ದೇಹಕ್ಕೆ ಅವಶ್ಯಕತೆಗಿಂತ ಹೆಚ್ಚು ಕೊಬ್ಬಿನಂಶ ಹೊಟ್ಟೆಯ ಭಾಗದಲ್ಲೇ ಶೇಖರಣೆಯಾಗುತ್ತದೆ.
ಈ ಸಮಸ್ಯೆಗೆ ವಯಸ್ಸಿನ ಮಿತಿ ಇಲ್ಲ ಇಳಿ ವಯಸ್ಸಿನಿಂದ ಮುದುಕರವರೆಗೂ ಎಲ್ಲರನ್ನು ಕಾಡುತ್ತದೆ, ಹಾಗಾಗಿ ಸೌದರ್ಯದ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ.
ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೊಟ್ಟೆಯ ಸಮಸ್ಯೆ ಕಾಡುತ್ತಿರುವುದು. ತಜ್ಞರ ಪ್ರಕಾರ ಹೊಟ್ಟೆಯ ಬೊಜ್ಜು ಅತೀಯಾಗಿ ಕಾಣಿಸಿಕೊಂಡರೆ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದಂತೆ!
ಸ್ವೀಟ್ಸ್ ಸ್ವಲ್ಪ ಕಡಿಮೆ ತಿನ್ನಿ!
ಸಾಮಾನ್ಯವಾಗಿ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ ಪ್ರತಿದಿನ ಸೇವಿಸುವ ಸಿಹಿ ಪದಾರ್ಥಗಳು! ಹಾಗಾಗಿ ಸಕ್ಕರೆ ಮಿಶ್ರಿತ ತಿನಿಸುಗಳಾದ ಬೇಕರಿ ತಿನಿಸುಗಳು, ಕೆಲವೊಂದು ಬಗೆಯೆ ಐಸ್ಕ್ರೀಮ್ಗಳು ಮತ್ತು ಸಿಹಿ ತಿಂಡಿಗಳಿಂದ ದೂರವಿರಿ
ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಲಿಂಬೆ ನೀರು
ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಸಣ್ಣದಾದರೆ ಒಂದು ಲಿಂಬೆ, ಅಥವಾ ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ ದಿನಾ ಖಾಲಿ ಹೊಟ್ಟೆಗೆ ಸೇವಿಸಿ
ಜೀರಿಗೆ ನೀರು
ಒಂದೆರಡು ಟೀ ಚಮಚ ಜೀರಿಗೆಯನ್ನು ನೀರಿನೊಂದಿಗೆ ಚೆನ್ನಾಗಿ ಕುದಿಸಿ ಕುದಿಸಿ, ಉಗುರು ಬೆಚ್ಚಗಿರುವಾಗಲೇ ಪ್ರತಿದಿನ ಒಂದೊಂದು ಲೋಟ ಕುಡಿಯುತ್ತಾ ಬಂದರೆ ಕಿಬ್ಬೊಟ್ಟೆ ಹಾಗೂ ಸೊಂಟದ ಸುತ್ತಲೂ ಶೇಖರಣೆ ಗೊಂಡ ಕೊಬ್ಬು ಸುಲಭವಾಗಿ ಕರಗಿಸುತ್ತದೆ
ಗ್ರೀನ್ ಟೀ ಕುಡಿಯಿರಿ
ಪ್ರತಿ ದಿನ ಎರಡು ಗ್ಲಾಸ್ ಹಾಲಿಲ್ಲದ ಗ್ರೀನ್ ಟೀ ಸೇವಿಸಿದರೆ, ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಕೊಬ್ಬನ್ನು ಕರಗಿಸಲೂ ಸಾಧ್ಯವಾಗುತ್ತದೆ.
ಶುಂಠಿ ಟೀ ಕುಡಿಯಿರಿ
ಹಸಿ ಶುಂಠಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ ಎಂದರೆ ನೀವು ನಂಬಲೇಬೇಕು!


Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಇಳಿಸುವ ವಿಧಾನ! ಒಮ್ಮೆ ಟ್ರೈ ಮಾಡಿ