Select Your Language

Notifications

webdunia
webdunia
webdunia
webdunia

ತೂಕ ಇಳಿಸುವ ವಿಧಾನ! ಒಮ್ಮೆ ಟ್ರೈ ಮಾಡಿ

ತೂಕ ಇಳಿಸುವ ವಿಧಾನ! ಒಮ್ಮೆ ಟ್ರೈ ಮಾಡಿ
ಬೆಂಗಳೂರು , ಮಂಗಳವಾರ, 2 ನವೆಂಬರ್ 2021 (10:13 IST)
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಕೇವಲ ಮನಸ್ಸಿನಲ್ಲಿ ಅಂದುಕೊಂಡರೆ ಸಾಲದು.
ಅದಕ್ಕಾಗಿ ಸರಿಯಾದ ಆಹಾರ ಪದ್ಧತಿಯನ್ನು ಮತ್ತು ಜೀವನ ಶೈಲಿಯನ್ನು ಸಹ ಅನುಸರಿಸಬೇಕು.
ಬೆಳಗಿನ ಸಮಯದ ಆಹಾರ ಪದ್ಧತಿ
ಬೆಳಗಿನ ಸಮಯದಲ್ಲಿ ಉಪಹಾರದ ಸಂದರ್ಭದಲ್ಲಿ ಕೋಳಿ ಮೊಟ್ಟೆಗಳನ್ನು ತಿನ್ನುವ ಬದಲು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಓಟ್ ಮೀಲ್ ಅಥವಾ ಬಾದಾಮಿ ಹಾಲು ಇಲ್ಲವೆಂದರೆ ಸೋಯಾ ಹಾಲು ಜೊತೆಗೆ ತಾಜಾ ಹಣ್ಣು ಅಥವಾ ಹಣ್ಣಿನ ರಸ ಸೇವನೆ ಮಾಡಬೇಕು.
ತರಕಾರಿ ಪದಾರ್ಥಗಳು ಹೆಚ್ಚಾಗಿರುವ ಪಾಸ್ತಾ ಅಥವಾ ಚೈನೀಸ್ ನೂಡಲ್ಸ್ ಸೇವನೆ ಮಾಡುವುದು, ಆಹಾರಪದ್ಧತಿಯಲ್ಲಿ ಬೀನ್ಸ್, ಪಾಲಕ್ ಸೊಪ್ಪು ಹೃದಯಕ್ಕೆ ಆರೋಗ್ಯಕರವಾದ ಪೌಷ್ಟಿಕ ಸತ್ವಗಳನ್ನು ಒಳಗೊಂಡ ಆಹಾರಗಳನ್ನು ಸೇವನೆ ಮಾಡಬೇಕು.
ಆಹಾರ ಪದ್ಧತಿ
webdunia

ಯಾರು ಹೆಚ್ಚಾಗಿ ಮಾಂಸಾಹಾರ, ಕೋಳಿ ಮೊಟ್ಟೆ, ಡೈರಿ ಉತ್ಪನ್ನಗಳು ಇವುಗಳನ್ನು ಸೇವನೆ ಮಾಡುತ್ತಾರೆ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೊರಿಗಳು, ಕೊಲೆಸ್ಟ್ರಾಲ್ ಅಂಶ, ಸ್ಯಾಚುರೇಟೆಡ್ ಕೊಬ್ಬಿನ ಅಂಶ ದೇಹಕ್ಕೆ ಸಿಗುತ್ತದೆ.
ಅದರಲ್ಲೂ ಪ್ರಾಣಿಗಳ ಮಾಂಸಾಹಾರದಲ್ಲಿ ಅತಿಹೆಚ್ಚಿನ ಕ್ಯಾಲರಿಗಳು ಇರುವುದರಿಂದ ಆರೋಗ್ಯಕ್ಕೆ ಇವುಗಳಿಂದ ತೊಂದರೆ ಹೆಚ್ಚು. ಹೀಗಾಗಿ ಕಡಿಮೆ ಕೊಬ್ಬಿನ ಅಂಶ ಒಳಗೊಂಡ ಡೈರಿ ಪದಾರ್ಥಗಳು, ಹಣ್ಣು ಮತ್ತು ತರಕಾರಿಗಳು, ಕಾಳು ಕಡಿ ಮತ್ತು ಧಾನ್ಯಗಳನ್ನು ಹೆಚ್ಚು ಸೇವನೆ ಮಾಡಬೇಕು.
ಮಾಂಸಹಾರ ಸೇವನೆಯಿಂದಾಗುವ ಸಮಸ್ಯೆಗಳು
webdunia

ಮಾಂಸಾಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವ ಜನರಿಗೆ ಅತಿಯಾದ ಬೊಜ್ಜು ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ.
ಅದರಲ್ಲಿ ಮುಖ್ಯವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯದ ತೊಂದರೆ, ಹೃದಯ ರಕ್ತನಾಳಗಳಿಗೆ ಸಮಸ್ಯೆ, ಅತಿಯಾದ ಬೊಜ್ಜು ಜೊತೆಗೆ ಕ್ಯಾನ್ಸರ್ ಸಮಸ್ಯೆ ಕೂಡ ಕಂಡುಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಸಸ್ಯಹಾರ ಪದ್ಧತಿಯ ಕಡೆಗೆ ಬದಲಾಗುವುದು ಒಳ್ಳೆಯದು.
ಸಸ್ಯಾಹಾರ ಪದ್ಧತಿ
webdunia

ಆರೋಗ್ಯಕರವಾದ ದೇಹದ ತೂಕವನ್ನು ಹೊಂದಲು ಸಸ್ಯಹಾರಿ ಪದಾರ್ಥಗಳು ನೈಸರ್ಗಿಕವಾಗಿ ಸಹಾಯಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನ ಅಂಶ ಮತ್ತು ಕ್ಯಾಲೊರಿ ಅಂಶಗಳು ಇರುವುದರಿಂದ ಮತ್ತು ಹೆಚ್ಚಿನ ಪ್ರಮಾಣದ ನಾರಿನ ಅಂಶ ಕೂಡ ಕಂಡು ಬರುವ ಕಾರಣದಿಂದ ಉತ್ತಮವಾದ ಮೆಟಬಾಲಿಸಂ ಪ್ರಕ್ರಿಯೆಗೆ ಬೇಕಾದ ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶಗಳು ಇದರಲ್ಲಿ ಸಿಗುತ್ತವೆ.
ಇದರಿಂದ ದೇಹದಲ್ಲಿ ಕಂಡುಬರುವ ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳನ್ನು ಕರಗಿಸಲು ಅನುಕೂಲವಾಗುತ್ತದೆ ಮತ್ತು ದೇಹದ ತೂಕವನ್ನು ಉತ್ತಮವಾಗಿ ನಿರ್ವಹಿಸಿ ಕ್ಯಾನ್ಸರ್, ಮಧುಮೇಹ ಮತ್ತು ಹೃದಯದ ತೊಂದರೆ ಸಹಿತ ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ.
ನಿಮ್ಮ ದೇಹದ ತೂಕ ಎನ್ನುವುದು ಕೇವಲ ಒಂದು ದಿನದಲ್ಲಿ ಕಡಿಮೆಯಾಗುವ ವಿಚಾರವಲ್ಲ. ಈ ಮೇಲಿನ ಆಹಾರ ಪದ್ಧತಿಯನ್ನು ಸಹ ನೀವು ದಿನಂಪ್ರತಿ ಅನುಸರಿಸುತ್ತಾ ಬಂದರೆ ನಿಮಗೆ ಉತ್ತಮವಾದ ಫಲಿತಾಂಶಗಳು ಕೆಲವೇ ದಿನಗಳಲ್ಲಿ ಸಿಗುತ್ತವೆ. ಹಾಗಾಗಿ ತಾಳ್ಮೆ ಇರಲಿ ಮತ್ತು ನಿರಂತರವಾಗಿ ಈ ಕ್ರಮವನ್ನು ಅನುಸರಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಇಳಿಸಲು ಸರಳ ಟಿಪ್ಸ್‍ಗಳು ಟ್ರೈ ಮಾಡಿ