Select Your Language

Notifications

webdunia
webdunia
webdunia
webdunia

ಆರೋಗ್ಯಕರ ಜೀವನಕ್ಕೆ ವ್ಯಾಯಾಮ ಎಷ್ಟು ಅವಶ್ಯಕ?

ಆರೋಗ್ಯಕರ ಜೀವನಕ್ಕೆ ವ್ಯಾಯಾಮ ಎಷ್ಟು ಅವಶ್ಯಕ?
ಬೆಂಗಳೂರು , ಭಾನುವಾರ, 24 ಅಕ್ಟೋಬರ್ 2021 (13:50 IST)
ನಿಯಮಿತವಾದ ವ್ಯಾಯಾಮ ಮಾಡುವ ಅಭ್ಯಾಸವನ್ನು ಪ್ರತಿನಿತ್ಯ ರೂಢಿಯಲ್ಲಿಕೊಳ್ಳಿ. ದೈಹಿಕ ವ್ಯಾಯಾಮ ನಿಜವಾಗಿಯೂ ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯಕವಾಗಿದೆ.
ನಿಯಮಿತವಾದ ವ್ಯಾಯಾಮವು ನಿಮ್ಮನ್ನು ಸದೃಢಗೊಳಿಸುತ್ತದೆ. ಜತೆಗೆ ಪ್ರತಿನಿತ್ಯ 45 ರಿಂದ 50 ನಿಮಿಷಗಳ ವ್ಯಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿರಲಿ. ನೀವು ವ್ಯಾಯಾಮ ಮಾಡದಿದ್ದರೆ, ಏನೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬುದರ ಕುರಿತಾದ ಕೆಲವು ಮಾಹಿತಿಗಳು ಇಲ್ಲಿದೆ.
ಆರೋಗ್ಯಕರ ಜೀವನ ಶೈಲಿಗೆ ಪೌಷ್ಟಿಕ ಆಹಾರ ಸೇವನೆ ಮಾಡುವುದು ಜತೆಗೆ ದೇಹಕ್ಕೆ ಹಾನಿ ಮಾಡುವ ಧೂಮಪಾನ ಮದ್ಯಪಾನದಿಂದ ದೂರವಿರುವುದು ಒಳ್ಳೆಯದು. ಇದರ ಜತೆಗೆ ದೈಹಿಕವಾದ ವ್ಯಾಯಾಮ ಕೂಡಾ ಅಷ್ಟೇ ಮುಖ್ಯ. ಈಗೆಲ್ಲಾ ಎಲ್ಲಾ ಸಾಮಗ್ರಿಗಳನ್ನು ಅಂಗಡಿಗೆ ಹೋಗಿ ತರುವ ಅವಶ್ಯಕತೆಯೇ ಇಲ್ಲ. ಆನ್ಲೈನ್ ಮೂಲಕ ಆರ್ಡರ್ ಮಾಡುವುದರಿಂದ ನಡೆಯುವ ಅಭ್ಯಾಸವೇ ತಪ್ಪಿಹೋಗಿದೆ. ಕೂತಲ್ಲಿಯೇ ಎಲ್ಲವೂ ಬಂದಿರುತ್ತದೆ. ಹೀಗಿರುವಾಗ ನಿಮ್ಮ ಆರೋಗ್ಯದ ಕುರಿತಾಗಿ ಕಾಳಜಿ ಮಾಡಬೇಕಾದರೆ ವ್ಯಾಯಾಮ ಅತ್ಯವಶ್ಯಕ. ನಿಯಮಿತವಾದ ವ್ಯಾಯಾಮ ಮಾಡುವ ಅಭ್ಯಾಸವನ್ನು ಪ್ರತಿನಿತ್ಯ ರೂಢಿಯಲ್ಲಿಕೊಳ್ಳಿ.
ಹೃದಯ ಆರೋಗ್ಯ ಸುಧಾರಿಸುವುದಿಲ್ಲ
ನಿಯಮಿತ ವ್ಯಾಯಾಮದಿಂದ ಹೃದಯದ ಆರೋಗ್ಯವು ಸುಧಾರಿಸುತ್ತದೆ. ಜತೆಗೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನೀವು ದೀರ್ಘಕಾಲದವರೆಗೆ ವ್ಯಾಯಾಮ ಮಾಡದಿದ್ದರೆ ಹೃದಯದ ಆರೋಗ್ಯವು ಕುಂಠಿತಗೊಳ್ಳಬಹುದು. ಹಾಗಿರುವಾಗ ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಯಿರಲಿ.
ಸ್ನಾಯುಗಳಲ್ಲಿ ದುರ್ಬಲತೆ
ಸಾಕಷ್ಟು ದೈಹಿಕ ವ್ಯಾಯಾಮ ಮಾಡದಿದ್ದಾಗ ಸ್ನಾಯುವಿನ ಬಲವು ಕಡಿಮೆಯಾಗುತ್ತದೆ. ಜತೆಗೆ ಸ್ನಾಯು ಸೆಳೆತ, ನೋವುಗಳು ಕಂಡು ಬರುತ್ತವೆ. ಹೀಗಿರುವಾಗ ಪ್ರತಿನಿತ್ಯವೂ ನಿಯಮಿತವಾಗಿ ವ್ಯಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿರಲಿ.
ನಿದ್ರೆಯ ತೊಂದರೆ
ಉತ್ತಮ ವ್ಯಾಯಾಮವು ನಿಮ್ಮ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ. ನಿದ್ರೆ ಕೊರತೆಯು ದೇಹಕ್ಕೆ ಸುಸ್ತು, ಆಯಾಸವನ್ನು ಉಂಟು ಮಾಡುತ್ತದೆ. ನಿದ್ರೆಯ ಕೊರತೆಯು ಹಾರ್ಮೋನುಗಳ ಸಮಸ್ಯೆಗಳೊಂದಿಗೆ ಸಂಭವಿಸುತ್ತದೆ. ಇದರಿಂದ ಮಧುಮೇಹದ ಅಪಾಯ, ತೂಕ ಹೆಚ್ಚಾಗುವುದು ಮತ್ತು ಮಾನಸಿಕ ಆರೋಗ್ಯ ಹದಗೆಡುವ ತೊಂದರೆಗಳು ಉಂಟಾಗಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಸೌಂದರ್ಯದ ಗುಟ್ಟು "ಚಂದನ"!