Select Your Language

Notifications

webdunia
webdunia
webdunia
webdunia

ಸೌಂದರ್ಯದ ಗುಟ್ಟು "ಚಂದನ"!

ಸೌಂದರ್ಯದ ಗುಟ್ಟು
ಬೆಂಗಳೂರು , ಭಾನುವಾರ, 24 ಅಕ್ಟೋಬರ್ 2021 (12:29 IST)
ಚಂದನಕ್ಕೆ ಅಥವಾ ಶ್ರೀಗಂಧಕ್ಕೆ ಪ್ರಮುಖ ಸ್ಥಾನವಿದ್ದು ನೂರಾರು ವರ್ಷಗಳಿಂದ ಪ್ರಮುಖ ಸೌಂದರ್ಯ ಪ್ರಸಾಧನದ ರೂಪದಲ್ಲಿ ಬಳಸಲಾಗುತ್ತಾ ಇದೆ.
ಸುಂದರ, ನೈಸರ್ಗಿಕ, ಕಾಂತಿಯುಕ್ತ ವದನ ಪಡೆಯಬೇಕಾದರೆ ಕೆಳಗಿರುವ ಯಾವುದಾದರೂ ಒಂದು ವಿಧಾನ ಅನುಸರಿಸಿದರೆ ಸಾಕು.
ಚಂದನ ಮತ್ತು ಹಾಲು
webdunia

ಗಂಧದ ಕೊರಡನ್ನು ಕೊಂಚ ಹಾಲಿನೊಂದಿಗೆ ತೇದು ದಪ್ಪನೆಯ ಲೇಪ ತಯಾರಿಸಿ. ಕೊರಡು ಇಲ್ಲದಿದ್ದರೆ ಚಂದನದ ಪುಡಿಯನ್ನೂ ಬಳಸಬಹುದು. ಚೆನ್ನಾಗಿ ಒಣಗಿದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಂಡು ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಉಜ್ಜಲು ಹೋಗಬೇಡಿ.
ಚಂದನ ಮತ್ತು ಲೋಳೆಸರ
webdunia

ಆಲೋವೆರಾದ ರಸ ಮತ್ತು ಒಂದು ದೊಡ್ಡ ಚಮಚ ಚಂದನದ ಪುಡಿಯನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಕೊಂಚ ಹೊತ್ತು ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಂದು ಅಥವಾ ಎರಡು ಬಾರಿ ಮಾತ್ರ ಈ ವಿಧಾನ ಅನುಸರಿಸಿ. ಈ ವಿಧಾನ ಬಿಸಿಲಿಗೆ ಕಪ್ಪಾದ ಅಥವಾ ಬೇರಾವುದೋ ಕಾರಣದಿಂದ ಚರ್ಮ ತೀರಾ ಒಣಗಿದ್ದರೆ ಅತ್ಯಂತ ಸೂಕ್ತವಾಗಿದೆ.
ಚಂದನ ಮತ್ತು ಅರಿಶಿಣ
webdunia

ಎಲ್ಲಾ ಬಗೆಯ ಚರ್ಮಕ್ಕೆ ಸೂಕ್ತವಾದ ಈ ಲೇಪನಕ್ಕಾಗಿ ಮೊದಲು ಸಮ ಪ್ರಮಾಣದಲ್ಲಿ ಅರಿಶಿಣ ಮತ್ತು ಚಂದನದ ಪುಡಿಗಳನ್ನು ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ಹಸಿ ಹಾಲು ಅಥವಾ ಮೊಸರನ್ನು ಬೆರೆಸಿ ಲೇಪನ ತಯಾರಿಸಿ. ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ ಕೊಂಚ ಹೊತ್ತು ಹಾಗೇ ಬಿಡಿ. ಬಳಿಕ ಮೊದಲು ತಣ್ಣೀರಿನಿಂದ, ಬಳಿಕ ಹಳದಿ ಬಣ್ಣವನ್ನು ನಿವಾರಿಸಲು ಕೊಂಚ ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.
ಚಂದನ ಮತ್ತು ಬೇವು
webdunia

ಮುಖದಲ್ಲಿ ಮೊಡವೆಗಳ ಕಾಟವಿದ್ದರೆ ಈ ಮುಖಲೇಪ ಸೂಕ್ತವಾಗಿದೆ. ಇದಕ್ಕಾಗಿ ಬೇವಿನ ಮತ್ತು ಚಂದನದ ಪುಡಿಗಳನ್ನು ಸಮ ಪ್ರಮಾಣದಲ್ಲಿ ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ. ಮೊಡವೆಗಳಿರುವ ಭಾಗಕ್ಕೆ ಹೆಚ್ಚು ದಪ್ಪನಾಗಿ ಹಚ್ಚಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಬೇವಿನ ಬ್ಯಾಕ್ಟೀರಿಯಾ ನಿವಾರಕ ಗುಣ ಮತ್ತು ಚಂದನದ ಪೋಷಣೆಯ ಗುಣಗಳು ಒಂದಾದಲ್ಲಿ ಅದ್ಭುತವಾದ ಪರಿಣಾಮಗಳನ್ನೇ ಪಡೆಯಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಎಳ್ಳಿನ ಎಣ್ಣೆಯ ಪ್ರಯೋಜನಗಳು