Select Your Language

Notifications

webdunia
webdunia
webdunia
webdunia

ತಲೆ ಕೂದಲು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ

ತಲೆ ಕೂದಲು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ
ಬೆಂಗಳೂರು , ಸೋಮವಾರ, 11 ಅಕ್ಟೋಬರ್ 2021 (07:05 IST)
ಕೂದಲು ಉದುರುವಿಕೆ, ಬಿಳಿ ಕೂದಲು ಅಥವಾ ನಿರ್ಜೀವತೆಯ ಸಮಸ್ಯೆಯನ್ನು ಪ್ರಸ್ತಾಪಿಸಿದಾಗಲೆಲ್ಲಾ, ನಾವು ಅದನ್ನು ಸೌಂದರ್ಯಕ್ಕೆ ಹೊಂದಿಸಿಕೊಂಡು ಮಾತನಾಡುತ್ತೇವೆ. ಆದರೆ ಕೆಲವೊಮ್ಮೆ ಈ ಸಮಸ್ಯೆಗಳು ನಮ್ಮ ದೈಹಿಕ ಸಮಸ್ಯೆಗಳ ಸಂಕೇತವೂ ಆಗಿರುತ್ತವೆ.

ಅನಾರೋಗ್ಯದಿಂದ ಬಳಲುತ್ತಿರುವಾಗ ದೇಹದಲ್ಲಿ ಹಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅದೇ ರೀತಿಯಲ್ಲಿ ಕೆಲವೊಮ್ಮೆ ನಿಮ್ಮ ಕೂದಲಿನ ಮೇಲೂ ಕಾಣಿಸಿಕೊಳ್ಳಬಹುದು. ಅಂದರೆ, ಕೂದಲಿನ ಸಮಸ್ಯೆ ಕೆಲವೊಮ್ಮೆ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿರಬಹುದು. ಆದ್ದರಿಂದ, ಪ್ರತಿ ಬಾರಿಯೂ ಈ ಲಕ್ಷಣಗಳು ಸಾಮಾನ್ಯ ಎಂಬಂತೆ ನಿರ್ಲಕ್ಷ್ಯ ತೋರಬೇಡಿ. ನಿಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಕಲ್ಪನೆಯನ್ನು ಕೂದಲಿನಲ್ಲಾಗುವ ಕೆಲವು ಬದಲಾವಣೆಗಳು ವಿವರಿಸುತ್ತವೆ.
ಕೂದಲಿನ ಸಮಸ್ಯೆಗಳು ಈ ರೋಗಗಳ ಸಂಕೇತವಾಗಿರಬಹುದು
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್
webdunia

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಜೀವನಶೈಲಿಯ ಸಮಸ್ಯೆಗಳಲ್ಲಿ ಒಂದು. ಇದನ್ನು ಪಿಸಿಓಎಸ್ ಅಥವಾ ಪಿಸಿಓಡಿ ಎಂದೂ ಕರೆಯುತ್ತಾರೆ. ದೇಹದಲ್ಲಿನ ಹಾರ್ಮೋನುಗಳ ಅಸಮತೋಲನದಿಂದಾಗಿ ಈ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಅಂಡಾಶಯದಲ್ಲಿ ಸಣ್ಣ ಗಡ್ಡೆಗಳು ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಪಿರಿಯಡ್ಸ್ ಅನಿಯಮಿತವಾಗಿರುತ್ತದೆ. ಬೊಜ್ಜು ಹೆಚ್ಚಾಗಲು ಆರಂಭವಾಗುತ್ತದೆ ಮತ್ತು ಕೂದಲು ನಿರ್ಜೀವವಾಗುತ್ತದೆ. ಜತೆಗೆ ಕೂದಲು ಉದುರಲು ಆರಂಭವಾಗುತ್ತದೆ. ಆದ್ದರಿಂದ ನೀವು ಇಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಥೈರಾಯ್ಡ್
webdunia

ಕೂದಲು ತುಂಬಾ ತೆಳುವಾಗಲು ಆರಂಭಿಸಿದರೆ, ಅದು ಥೈರಾಯ್ಡ್ನ ಲಕ್ಷಣವಾಗಿರಬಹುದು. ಹೈಪೋಥೈರಾಯ್ಡಿಸಂ ಸ್ಥಿತಿಯಲ್ಲಿ, ಥೈರಾಯ್ಡ್ ಗ್ರಂಥಿಯು ಸಾಕಷ್ಟು ಥೈರಾಯ್ಡ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಜ್ಞಾಪಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೂದಲು ವೇಗವಾಗಿ ಉದುರಲು ಆರಂಭವಾಗುತ್ತದೆ. ಕೂದಲು ಉದುರುವುದು ಕೂಡ ಥೈರಾಯ್ಡ್ನ ಲಕ್ಷಣವಾಗಿರಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ.
ಅಕಾಲಿಕ ಕೂದಲು ಉದುರುವುದು ಒತ್ತಡದ ಸಂಕೇತ
webdunia

ಅಕಾಲಿಕವಾಗಿ ತಲೆ ಕೂದಲು ಉದುರಲು ಆರಂಭವಾದರೆ ಒತ್ತಡದ ಸಂಕೇತವಾಗಿರುತ್ತದೆ. ಇದು ಅನೇಕ ಸಂಶೋಧನೆಗಳಲ್ಲಿ ನಿರೂಪಿತವಾಗಿದೆ. ಆದ್ದರಿಂದ, ನಿಮ್ಮ ಕೂದಲು ಬೇಗನೆ ಬೂದು ಬಣ್ಣಕ್ಕೆ ತಿರುಗುತ್ತಿದ್ದರೆ ಅಥವಾ ಬಿಳಿಯಾದರೆ ನಿಮ್ಮ ಆಹಾರದ ಬಗ್ಗೆ ಗಮನ ಹರಿಸಬೇಕು. ಜತೆಗೆ ಧ್ಯಾನ ಮತ್ತು ಯೋಗದ ಮೊರೆ ಹೋಗಿ.
ರಕ್ತಹೀನತೆ ಸಮಸ್ಯೆ
ತಲೆಸ್ನಾನ ಮಾಡುವಾಗ ಅಥವಾ ತಲೆ ಬಾಚುವಾಗ ಒಂದೇ ಸಮನೇ ತುಂಬಾ ಕೂದಲು ಉದುರಿದರೆ ಅದು ರಕ್ತಹೀನತೆಯ ಲಕ್ಷಣವಾಗಿರಬಹುದು. ಎಚ್ಚರ ವಹಿಸಿ ಮತ್ತು ತಜ್ಞರೊಂದಿಗೆ ಸಮಾಲೋಚಿಸಿ. ಜತೆಗೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದಲ್ಲದೇ, ಈಸ್ಟ್ರೊಜೆನ್ ಹಾರ್ಮೋನ್ ಮಟ್ಟದಲ್ಲಿ ಬದಲಾವಣೆಯಾಗುವುದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಈ ಜ್ಯೂಸ್ ಕುಡಿಯೋದ್ರಿಂದ ಪ್ರಯೋಜನ