Select Your Language

Notifications

webdunia
webdunia
webdunia
webdunia

ಮೊಸರು ಹಚ್ಚಿದರೆ ಪಡೆಯಬಹುದು ಹೊಳೆಯುವ ತ್ವಚೆ

ಮೊಸರು ಹಚ್ಚಿದರೆ ಪಡೆಯಬಹುದು ಹೊಳೆಯುವ ತ್ವಚೆ
ಹೊಸದಿಲ್ಲಿ , ಬುಧವಾರ, 6 ಅಕ್ಟೋಬರ್ 2021 (12:10 IST)
ಮೊಸರು ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಮೊಸರಿನ ಬಳಕೆಯಿಂದ, ಮುಖದ ಸುಕ್ಕುಗಳು, ಲೈನ್ಸ್ , ಟ್ಯಾನಿಂಗ್ ಸಮಸ್ಯೆಗಳು, ಮೊಡವೆ ಕಲೆಗಳು ಇತ್ಯಾದಿಗಳನ್ನು ಹೋಗಲಾಡಿಸಬಹುದು.

ಮೊಸರಿನಲ್ಲಿರುವ ಸತು, ಲ್ಯಾಕ್ಟಿಕ್ ಆಮ್ಲ, ವಿಟಮಿನ್ ಗಳು ಚರ್ಮವನ್ನು ಆರೋಗ್ಯವಾಗಿಡುತ್ತವೆ.
ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ, ಮೊಸರಿನಿಂದ ಮಾಡಿದ ಫೇಸ್ ಪ್ಯಾಕ್ ಅನ್ನು ಬಳಸಿ. ಈ ಫೇಸ್ ಪ್ಯಾಕ್ ತ್ವಚೆಯನ್ನು ತಂಪಾಗಿರಿಸುತ್ತವೆ.
1. ಮೊಸರು ಮತ್ತು ರೋಸ್ ವಾಟರ್
webdunia

-ಮೊಸರಿನಲ್ಲಿ ಸ್ವಲ್ಪ ರೋಸ್ ವಾಟರ್ ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ತ್ವಚೆಗೆ ಹಚ್ಚಿ.
-ಅದರ ನಂತರ 15 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
-ನಿರಂತರವಾಗಿ ಹೀಗೆ ಮಾಡುತ್ತಾ ಬಂದರೆ ತ್ವಚೆಗೆ ಹೊಳಪೂ ನೀಡುತ್ತದೆ.
-ನಂತರ ನಿಮ್ಮ ಚರ್ಮವನ್ನು ಮೃದುವಾದ ಟವೆಲ್ ನಿಂದ ಒಣಗಿಸಿ.
ಅದರ ನಂತರ ಉತ್ತಮ ಮಾಯಿಶ್ಚರೈಸರ್ ಹಚ್ಚಿ.
2. ಮೊಸರು ಮತ್ತು ಆಲಿವ್ ಎಣ್ಣೆ
webdunia

-ಮೂರು ಚಮಚ ಮೊಸರು ಮತ್ತು ಒಂದು ಚಮಚ ಆಲಿವ್ ಎಣ್ಣೆಯನ್ನು (oಟive oiಟ) ಬೆರೆಸಿ ಪೇಸ್ಟ್ ತಯಾರಿಸಿ.
-ಈ ಪೇಸ್ಟ್ ಅನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ, ಮಸಾಜ್ ಮಾಡಿ.
-15-20 ನಿಮಿಷಗಳ ನಂತರ ಮುಖಾನ್ನು ತೊಳೆಯಿರಿ.
-ಹೀಗೆ ಮಾಡುವುದರಿಂದ ತ್ವಚೆ ವಯಸ್ಸಾದಂತೆ ಕಾಣಿಸುವುದಿಲ್ಲ.
3. ಮೊಸರು ಮತ್ತು ಕಡಲೆ ಹಿಟ್ಟು
-ಒಂದು ಟೀಚಮಚ ಕಡಲೆಹಿಟ್ಟು ಅರ್ಧ ಚಮಚ ನಿಂಬೆ ರಸ ಮತ್ತು 2 ಚಮಚ ಮೊಸರನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿ.
-ಇದನ್ನು ಮುಖಕ್ಕೆ ಹಚ್ಚಿದ ನಂತರ, ಸ್ವಲ್ಪ ಸಮಯದ ನಂತರ ಶುದ್ಧ ನೀರಿನಿಂದ ತೊಳೆಯಿರಿ.
-ಇದು ಚರ್ಮದ ಮೇಲೆ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
4. ಮೊಟ್ಟೆ ಮತ್ತು ಕಡಲೆ ಹಿಟ್ಟು
-ಮೊದಲು 1 ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ.
-ಈಗ 1 ಟೀಸ್ಪೂನ್ ಕಡಲೆ ಹಿಟ್ಟು, ಸಣ್ಣ ಬಾಳೆಹಣ್ಣು ಮತ್ತು 2 ಚಮಚ ಮೊಸರು ಸೇರಿಸಿ.
-ಈ ಮೂರು ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
-ಮೊಸರಿನಿಂದ ಮಾಡಿದ ಈ ಫೇಸ್ ಪ್ಯಾಕ್ ಅನ್ನು ಪ್ರತಿದಿನ ಹಚ್ಚುವುದರಿಂದ ಮುಖಡ ಸೌಂದರ್ಯ ಹೆಚ್ಚುತ್ತದೆ.
-ಅಲ್ಲದೆ ಚರ್ಮ ಸಂಬಂಧಿ ಸಮಸ್ಯೆಗಲು ಕೂಡಾ ದೂರವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪರಂಗಿ ಹಣ್ಣು ಸೇವಿಸುವಾಗ ಎಚ್ಚರವಿರಲಿ!