Select Your Language

Notifications

webdunia
webdunia
webdunia
webdunia

ಪಪ್ಪಾಯಿ ಹಣ್ಣು ಮಾತ್ರ ಅಲ್ಲ, ಎಲೆಯೂ ಆರೋಗ್ಯಕರ ಗುಣಗಳಿಂದ ಕೂಡಿದೆ

ಪಪ್ಪಾಯಿ ಹಣ್ಣು ಮಾತ್ರ ಅಲ್ಲ, ಎಲೆಯೂ  ಆರೋಗ್ಯಕರ ಗುಣಗಳಿಂದ ಕೂಡಿದೆ
ಬೆಂಗಳೂರು , ಸೋಮವಾರ, 4 ಅಕ್ಟೋಬರ್ 2021 (15:14 IST)
ಪಪ್ಪಾಯಿ ಎಲೆಯ ಜ್ಯೂಸ್ ಫ್ಲೇವನಾಯ್ಡ್ಗಳು ಮತ್ತು ಕ್ಯಾರೋಟಿನ್ ಮಾತ್ರವಲ್ಲದೆ ವಿಟಮಿನ್ ಎ, ಬಿ, ಸಿ ಮತ್ತು ಡಿ ಅನ್ನು ಹೊಂದಿರುತ್ತದೆ. ಪಪ್ಪಾಯಿ ಎಲೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.
Photo Courtesy: Google

ಪಪ್ಪಾಯಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ. ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ಇದು ಇತರ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಅದರಂತೆ ಪಪ್ಪಾಯಿಯ ಎಲೆಗಳು ಕೂಡ ಅನೇಕ ಪ್ರಯೋಜನಗಳನ್ನು ಹೊಂದಿವೆ. ಪಪ್ಪಾಯಿ ಬೀಜಗಳು ಮತ್ತು ಎಲೆಗಳು ಆರೋಗ್ಯಕ್ಕೂ ಒಳ್ಳೆಯದು. ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
ಪಪ್ಪಾಯಿ ಎಲೆಯ ಜ್ಯೂಸ್ ಉತ್ಕರ್ಷಣ ನಿರೋಧಕಗಳು, ಫ್ಲೇವನಾಯ್ಡ್ಗಳು ಮತ್ತು ಕ್ಯಾರೋಟಿನ್ ಮಾತ್ರವಲ್ಲದೆ ವಿಟಮಿನ್ ಎ, ಬಿ, ಸಿ ಮತ್ತು ಡಿ ಅನ್ನು ಹೊಂದಿರುತ್ತದೆ. ಪಪ್ಪಾಯಿ ಎಲೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಡೆಂಗ್ಯೂ ತಡೆಗಟ್ಟಲು ಪಪ್ಪಾಯಿ ಎಲೆಗಳು ವಿಶೇಷವಾಗಿ ಉಪಯುಕ್ತವಾಗಿವೆ. ಇವುಗಳನ್ನು ತೆಗೆದುಕೊಳ್ಳುವುದರಿಂದ ರಕ್ತದಲ್ಲಿ ಪ್ಲೇಟ್ ಲೆಟ್ಸ್ ಹೆಚ್ಚಾಗುತ್ತದೆ.
ಡೆಂಗ್ಯೂ ವಿರುದ್ಧ ಹೋರಾಡಲು ಪಪ್ಪಾಯಿ ಎಲೆಯ ಜ್ಯೂಸ್
ಡೆಂಗ್ಯೂ ವಿರುದ್ಧ ಹೋರಾಡಲು ಪಪ್ಪಾಯಿ ಎಲೆಯ ಜ್ಯೂಸ್ ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರ ಕಾಣಿಸಿಕೊಂಡರೆ ರಕ್ತದಲ್ಲಿನ ಪ್ಲೇಟ್ಲೆಟ್ಗಳ ಸಂಖ್ಯೆ ವೇಗವಾಗಿ ಕುಸಿಯುತ್ತದೆ. ಪ್ಲೇಟ್ಲೆಟ್ಗಳ ಇಳಿಕೆ ಮತ್ತು ಅಧಿಕ ಜ್ವರದಿಂದಾಗಿ ದೇಹವು ನಿತ್ರಾಣಗೊಂಡಂತೆ ಭಾಸವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪಪ್ಪಾಯಿ ಎಲೆಗಳನ್ನು ಸೇವಿಸಿದರೆ ಪ್ಲೇಟ್ಲೆಟ್ಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತದೆ.
ಮಲೇರಿಯಾಗೆ ರಾಮಬಾಣ
ಪಪ್ಪಾಯಿ ಎಲೆಗಳ ರಸ ಅಥವಾ ಸಾರವನ್ನು ಮಲೇರಿಯಾ ಚಿಕಿತ್ಸೆಗೂ ಬಳಸಲಾಗುತ್ತದೆ. ಮಲೇರಿಯಾ ಜ್ವರವನ್ನು ನಿಯಂತ್ರಿಸಲು ಸಹಾಯ ಮಾಡುವ ಪ್ಲಾಜ್ಮೋಡಿಸ್ಟಾಟಿಕ್ ಗುಣಗಳು ಪಪ್ಪಾಯಿ ಎಲೆಗಳಲ್ಲಿ ಕಂಡು ಬರುತ್ತವೆ. ಹೀಗಾಗಿ ಮಲೇರಿಯಾ ಜ್ವರಕ್ಕೆ ಪಪ್ಪಾಯಿ ಎಲೆ ಅತ್ಯುತ್ತಮ ಮನೆಮದ್ದು ಎನ್ನಬಹುದು.
ಜೀರ್ಣಕಾರಿ ಸಮಸ್ಯೆಗೆ ಪರಿಹಾರ
ಪಪ್ಪಾಯಿ ಎಲೆ ಕೈಮೋಪೆಪಿನ್ನ ಪೆಪಿನ್ ಅಂಶಗಳನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಬೇಕಾದ ಅಗತ್ಯ ಫೈಬರ್ ಅನ್ನು ಒಳಗೊಂಡಿರುತ್ತವೆ. ಇದನ್ನು ಸೇವಿಸುವುದರಿಂದ ಎದೆ ಉರಿ, ಹುಳಿ ತೇಗು, ಅಜೀರ್ಣ ಸಮಸ್ಯೆ ಮತ್ತು ಮಲಬದ್ಧತೆ ಮುಂತಾದ ಸಮಸ್ಯೆಗಳು ದೂರವಾಗುತ್ತದೆ.
ಪಿತ್ತಜನಕಾಂಗಕ್ಕೆ ಸಹಕಾರಿ
ಪಪ್ಪಾಯಿ ಎಲೆಗಳ ಸೇವನೆಯು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಮೂಲಕ, ಲಿಪಿಡ್ಗಳು ಪೆರಾಕ್ಸಿಡೇಶನ್ ಕೂಡ ಕಡಿಮೆಯಾಗುತ್ತದೆ. ಇದೇ ಕಾರಣದಿಂದಾಗಿ ಕಾಮಾಲೆ, ಲಿವರ್ ಸಿರೋಸಿಸ್ ಮೊದಲಾದ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ರೋಗಗಳು ದೂರವಾಗುತ್ತವೆ.
ಇನ್ನಿತರ ಸಮಸ್ಯೆಗೆ ಪರಿಹಾರ
ಪಿರಿಯಡ್ಸ್ ನೋವನ್ನು ಕಡಿಮೆ ಮಾಡಲು ಈ ಜ್ಯೂಸ್ ತುಂಬಾ ಉಪಯುಕ್ತವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಪ್ಪಾಯಿ ಎಲೆಯ ಜ್ಯೂಸ್ ತುಂಬಾ ಉಪಯುಕ್ತವಾಗಿದೆ. ಇದು ವೈರಲ್ ಸೋಂಕಿನಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಈ ರಸವನ್ನು ಕುಡಿಯುವುದರಿಂದ ರಕ್ತದಲ್ಲಿ ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ಗಳ ಸಂಖ್ಯೆ ಹೆಚ್ಚಾಗುತ್ತದೆ. ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಕಬ್ಬಿಣದ ಕೊರತೆಯು ಕಡಿಮೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ಬೆಳಿಗ್ಗೆ ಏಲಕ್ಕಿ ನೆನೆಸಿದ ನೀರನ್ನು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?