Select Your Language

Notifications

webdunia
webdunia
webdunia
webdunia

ನೆನಪಿನ ಶಕ್ತಿಗೂ ಚೆನ್ನಾಗಿರಬೇಕೆಂದರೆ ಆಹಾರ ಕ್ರಮದ ಬಗ್ಗೆ ಇರಲಿ ಎಚ್ಚರ!

ನೆನಪಿನ ಶಕ್ತಿಗೂ ಚೆನ್ನಾಗಿರಬೇಕೆಂದರೆ ಆಹಾರ ಕ್ರಮದ ಬಗ್ಗೆ ಇರಲಿ ಎಚ್ಚರ!
ಬೆಂಗಳೂರು , ಸೋಮವಾರ, 1 ನವೆಂಬರ್ 2021 (13:40 IST)
ನೆನಪಿನ ಶಕ್ತಿಯು ವಯಸ್ಸಿನ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗುತ್ತದೆ. ಆಹಾರವು ನಮ್ಮ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ನಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಎಲ್ಲಾ ಸಂಶೋಧನೆಗಳು ತಿಳಿಸಿವೆ.
ನಿಮ್ಮ ಆಹಾರ ಕ್ರಮ ಸರಿಯಾಗಿಲ್ಲದಿದ್ದರೆ ದೈಹಿಕ ಮತ್ತು ಮಾನಸಿಕ ಎರಡೂ ಸಮಸ್ಯೆಗಳು ನಿಮ್ಮನ್ನು ಅಕಾಲಿಕವಾಗಿ ಸುತ್ತುವರಿಯುತ್ತವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ಸಂಧಿವಾತ, ಬಿಪಿ, ಒತ್ತಡ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಅವರ ಆಹಾರ ಕ್ರಮವೂ ಒಂದು ಕಾರಣ. ದೇಹಕ್ಕೆ ಹಾಗೂ ಮಾನಸಿಕ ಆರೋಗ್ಯಕ್ಕೆ ತುಂಬಾ ಕೆಟ್ಟದ್ದು ಎಂದು ಪರಿಗಣಿಸಲಾದ ವಿಷಯಗಳ ಬಗ್ಗೆ ಅಥವಾ ಆಹಾರ ಪದ್ಧತಿಯ ಬಗ್ಗೆ ತಿಳಿಯುವುದು ಸೂಕ್ತ.
ಜಿಡ್ಡಿನ ಪದಾರ್ಥ
ಸಹಜವಾಗಿ, ಹೆಚ್ಚು ಜಿಡ್ಡಿನ ಆಹಾರವನ್ನು ತಿನ್ನುವುದು ರುಚಿಕರವಾಗಿರುತ್ತದೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಹೆಚ್ಚು ಕರಿದ ಆಹಾರವು ನಿಮ್ಮ ನರ ಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ಮೆದುಳಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಜಂಕ್ ಫುಡ್
ಜಂಕ್ ಫುಡ್‌ನಲ್ಲಿ ರುಚಿಯನ್ನು ಹೆಚ್ಚಿಸಲು, ಡೋಪಮೈನ್ ಹಾರ್ಮೋನ್ ನಂತಹ ಕೆಲವು ವಸ್ತುಗಳನ್ನು ಬಳಸಲಾಗುತ್ತದೆ. ಇದನ್ನು ಹೆಚ್ಚು ತಿನ್ನುವುದರಿಂದ, ವ್ಯಕ್ತಿಯಲ್ಲಿ ಒತ್ತಡದ ಮಟ್ಟವು ಹೆಚ್ಚಾಗುತ್ತದೆ ಮತ್ತು ನೆನಪಿನ ಶಕ್ತಿ ದುರ್ಬಲಗೊಳ್ಳಲು ಪ್ರಾರಂಭವಾಗುತ್ತದೆ.
ಮದ್ಯಪಾನ
ಮದ್ಯಪಾನ ಮಾಡುವ ಅಭ್ಯಾಸವು ನಿಮ್ಮ ಇಡೀ ಜೀವನವನ್ನು ಹಾಳುಮಾಡುತ್ತದೆ. ಇದು ನಿಮ್ಮ ದೇಹದಲ್ಲಿ ಅನೇಕ ಮಾರಣಾಂತಿಕ ಕಾಯಿಲೆಗಳನ್ನು ಉಂಟುಮಾಡುತ್ತದೆ. ಜೊತೆಗೆ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಸಿಹಿ ತಿಂಡಿ
ಸಿಹಿ ತಿನ್ನಲು ಇಷ್ಟಪಡುವವರೂ ಜಾಗರೂಕರಾಗಿರಬೇಕು. ಆರೋಗ್ಯ ತಜ್ಞರ ಪ್ರಕಾರ ಹೆಚ್ಚು ಸಕ್ಕರೆ ತಿನ್ನುವುದರಿಂದ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮನಸ್ಸು ಜಡವಾಗುತ್ತದೆ ಮತ್ತು ತನ್ನ ಕೆಲಸವನ್ನು ಸರಿಯಾಗಿ ಮಾಡಲಾರದು.
ಕೊಬ್ಬಿನಿಂದ ಕೂಡಿದ ಆಹಾರ
ಅಧಿಕ ಪ್ರಮಾಣದ ಟ್ರಾನ್ಸ್ ಕೊಬ್ಬು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ನೆನಪಿನ ಶಕ್ತಿ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ವ್ಯಕ್ತಿಯು ಮರೆವಿನ ಅಪಾಯವನ್ನು ಎದುರಿಸಬೇಕಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

‘ಬಾಳೆಹಣ್ಣಿನ ಬಜ್ಜಿ’ : ಹೊಸ ರೀತಿಯ ರುಚಿಗೆ ಪಾತ್ರರಾಗೋಣ!