Publish Date: Sat, 31 Mar 2018 (05:00 IST)
Updated Date: Sat, 31 Mar 2018 (05:07 IST)
ಬೆಂಗಳೂರು : ತಲೆಕೂದಲು ತುಂಬಾ ನಯವಾಗಿರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆಯಾಗಿರುತ್ತೆ. ಅದಕ್ಕೆಲ್ಲಾ ಹಣ ಖರ್ಚು ಮಾಡ್ಬೇಕು ಅಂತ ವರಿ ಮಾಡ್ಬೇಡಿ. ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್ ಕೂದಲು ನಿಮ್ಮದಾಗಿಸಿಕೊಳ್ಳಬಹುದು. ಆ ಟಿಪ್ಸ್ ಇಲ್ಲಿದೆ ನೋಡಿ.
ಗುಲಾಬಿ ಹೂವನ್ನ ಅಲಂಕಾರಕ್ಕೆ, ಮುಡಿದುಕೊಳ್ಳೋಕೆ ಬಳಸೋ ಜೊತೆಗೆ ಅದರಿಂದ ನಿಮ್ಮ ಕೂದಲ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇದಕ್ಕೆ ನೀವು ಕಷ್ಟನೂ ಪಡಬೇಕಿಲ್ಲ. ತಲೆಗೆ ಎಣ್ಣೆ ಹಚ್ಚುವಾಗೆಲ್ಲಾ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಕೊಬ್ಬರಿ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ(ಸ್ವಲ್ಪ ಬಿಸಿಯಾದ್ರೆ ಸಾಕು, ಹೊಗೆ ಬರುವಂತೆ ಕಾಯಿಸಬಾರದು) ಅದಕ್ಕೆ ಗುಲಾಬಿ ಹೂವಿನ ದಳಗಳನ್ನ ಹಾಕಿ. ಹೀಗೆ ಮಾಡಿದಾಗ ನೊರೆ ಬರುತ್ತದೆ. ಎಣ್ಣೆ ತಣ್ಣಗಾದ ನಂತರ ಗುಲಾಬಿ ದಳಗಳನ್ನ ಕಿವುಚಿ ತೆಗೆಯಿರಿ. ನಂತರ ಎಣ್ಣೆಯನ್ನ ತಲೆಗೆ ಸಂಪೂರ್ಣವಾಗಿ ಹಚ್ಚಿ ಮಸಾಜ್ ಮಾಡಿ. 3 ಗಂಟೆಗಳ ನಂತರ ಸ್ನಾನ ಮಾಡಬಹುದು. ಅಥವಾ ರಾತ್ರಿ ಎಣ್ಣೆ ಹಚ್ಚಿಕೊಂಡು ಬೆಳಿಗ್ಗೆ ತಲೆಗೆ ಸ್ನಾನ ಮಾಡಬಹುದು. ಇದ್ದರಿಂದ ನಿಮ್ಮ ಸಾಪ್ಟ್ ಹಾಗೂ ಸಿಲ್ಕಿಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ