Select Your Language

Notifications

webdunia
webdunia
webdunia
webdunia

ಅಪಘಾತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕಣ್ಣ್ಸನ್ನೆ ಹುಡುಗಿ ಪ್ರಿಯಾ!

ಅಪಘಾತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕಣ್ಣ್ಸನ್ನೆ ಹುಡುಗಿ ಪ್ರಿಯಾ!
ಗುಜರಾತ್ , ಮಂಗಳವಾರ, 27 ಮಾರ್ಚ್ 2018 (06:49 IST)
ಗುಜರಾತ್ : ಕಣ್ಣ್ಸನ್ನೆ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಲೆಯಾಳಿ ನಟಿ ಪ್ರಿಯಾ ವಾರಿಯರ್ ಅವರು ಇದೀಗ ಕಣ್ಣ್ಸನ್ನೆ ಮೂಲಕ ಜನರಿಗೆ ಅಪಘಾತದ ಬಗ್ಗೆ ಜಾಗೃತಿ ಮೂಡಿಸಲು ಶುರುಮಾಡಿದ್ದಾರೆ.


ಹೌದು. ಇವರ ಕಣ್ಣ್ಸನ್ನೆ ಸಾಮಾಜಿಕ ಜಾಲತಾಣಗಳಲ್ಲಿ  ಸಂಚಲನ ಮೂಡಿಸಿದ ನಂತರ  ಈಗ ಟ್ರಾಫಿಕ್ ಪೊಲೀಸರ ಜಾಹೀರಾತಿನಲ್ಲಿ ಕಾಣಿಸುಕೊಳ್ಳತ್ತಿದೆ. ಅಂದರೆ ಗುಜರಾತ್ ನ ವಡೋದರಾ ಪೊಲೀಸರು ಅಪಘಾತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಫೇಮಸ್ ಆಗಿದ್ದ ಪ್ರಿಯಾ ಅವರ ಕಣ್ಣ್ಸನ್ನೆ ದೃಶ್ಯವನ್ನು ಬಳಸಿಕೊಂಡಿದ್ದಾರೆ. ಅದರ ಜೊತೆಗೆ ‘ಕಣ್ಣ್ಮುಚ್ಚಿ ಕಣ್ಣ್ಬಿಡುವಷ್ಟರಲ್ಲಿ ಅಪಘಾತಗಳು ಸಂಭವಿಸುತ್ತವೆ. ಜಾಗೃತವಾಗಿ ವಾಹನವನ್ನು ಚಲಾಯಿಸಿ’ ಎಂದು ಅಡಿ ಬರಹವನ್ನು ಬರೆದಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಿಕಿತ್ಸೆಗೆ ಹಣವಿಲ್ಲದೇ, ಒದ್ದಾಡುತ್ತಿದ್ದ ಪೂಜಾ ದಾದ್ವಾಲ್ ಗೆ ಸಹಾಯ ನೀಡುವುದರ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು…?