Select Your Language

Notifications

webdunia
webdunia
webdunia
webdunia

ಕಣ್ಣಸನ್ನೆ ಹುಡುಗಿ ಪ್ರಿಯಾ ವಾರಿಯರ್ ಗಾಗಿ ಬಾಲಿವುಡ್ ನಿರ್ದೇಶಕರಿಬ್ಬರ ನಡುವೆ ಪೈಪೋಟಿ

ಕಣ್ಣಸನ್ನೆ ಹುಡುಗಿ ಪ್ರಿಯಾ ವಾರಿಯರ್ ಗಾಗಿ ಬಾಲಿವುಡ್ ನಿರ್ದೇಶಕರಿಬ್ಬರ ನಡುವೆ ಪೈಪೋಟಿ
ಮುಂಬೈ , ಶುಕ್ರವಾರ, 23 ಮಾರ್ಚ್ 2018 (06:23 IST)
ಮುಂಬೈ : ಕಣ್ಣಸನ್ನೆಯ ಮೂಲಕ ಒಂದೇ ದಿನದಲ್ಲೇ ನ್ಯಾಶನಲ್ ಕ್ರಶ್ ಎನಿಸಿಕೊಂಡ ಮಲಯಾಳಿ ನಟಿ ಪ್ರಿಯಾ ವಾರಿಯರ್ ಅವರನ್ನು ತಮ್ಮ ಸಿನಿಮಾಕ್ಕೆ ಕರೆತರುವುದರ ಕುರಿತಾಗಿ ಇಬ್ಬರು ಬಾಲಿವುಡ್ ನ ಖ್ಯಾತ ನಿರ್ದೇಶಕರ ನಡುವೆ ಪೈಪೋಟಿ ಶುರುವಾಗಿದೆ ಎಂಬ ಸುದ್ದಿ ಬಾಲಿವುಡ್ ನ ಅಂಗಳದಲ್ಲಿ ಕೇಳಿಬರುತ್ತಿದೆ.


ಇತ್ತಿಚೆಗಷ್ಟೇ ಕರಣ್ ಜೋಹರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಸಿಂಬಾ’ ಚಿತ್ರದಲ್ಲಿ ಮಲಯಾಳಿ ನಟಿ ಪ್ರಿಯಾ ವಾರಿಯರ್ ಅವರು ನಟಿಸಲಿದ್ದಾರೆ ಎಂದು ಸುದ್ದಿಯಾಗಿದ್ದು, ನಂತರ ಅವರನ್ನು ಬಿಟ್ಟು ಈ ಚಿತ್ರಕ್ಕೆ ಬಾಲಿವುಡ್ ನಟ  ಸೈಫ್ಅಲಿಖಾನ್ ಅವರ ಪುತ್ರಿ ಸಾರಾ  ಅವರನ್ನು ಆಯ್ಕೆ ಮಾಡಿರುವುದಾಗಿ ಸ್ವತಃ ಕರಣ್ ಜೋಹರ್ ಅವರೇ ಟ್ವೀಟ್ ಮೂಲಕ ಖಚಿತ ಪಡಿಸಿದ್ರು.


ಆದರೆ ಇದೀಗ ಕರಣ್ ಜೋಹರ್  ಹಾಗೂ ನಾಡಿಯಾದ್ ವಾಲಾಕೆ ಅವರ ನಡುವೆ ಪ್ರಿಯಾ ವಾರಿಯರ್ ಕುರಿತಾಗಿ ಪೈಪೋಟಿ ಶುರುವಾಗಿದೆ. ಕರಣ್ ಜೋಹರ್ ಅವರು ತಾವು ನಿರ್ದೇಶಿಸುತ್ತಿರುವ ಮುಂದಿನ ಚಿತ್ರ ‘ಸ್ಟುಡೆಂಟ್ ಆಫ್ ದ ಇಯರ್ 2’ ಗೆ ಪ್ರಿಯಾ ಅವರನ್ನು ಕರೆತರಲು ಮುಂದಾಗಿದ್ದರೆ , ಇತ್ತ ನಾಡಿಯಾದ್ ವಾಲಾಕೆ ಅವರೂ ಕೂಡ ತಮ್ಮ ಮುಂದಿನ ಚಿತ್ರಕ್ಕೆ ಪ್ರಿಯಾ ಅವರಲ್ಲಿ ಆ್ಯಕ್ಟ್ ಮಾಡುವಂತೆ ಕೇಳಿಕೊಂಡಿದ್ದಾರಂತೆ. ಆದರೆ ಪ್ರಿಯಾ ಅವರು ಮಾತ್ರ ತಮ್ಮ ನಿರ್ಧಾರವನ್ನು ಈಗಲೇ ತಿಳಿಸದೆ ಕಾಲಾವಕಾಶ ಕೇಳಿದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಲ್ ಡ್ರಾಪ್ ರೆಕಾರ್ಡ್ ನಲ್ಲಿ ಕಂಗನಾ ಹೆಸರು; ಪೊಲೀಸ್ ಅಧಿಕಾರಿಯ ವಿರುದ್ಧ ಸಿಟ್ಟಿಗೆದ್ದ ಕಂಗನಾ ಸಹೋದರಿ