Select Your Language

Notifications

webdunia
webdunia
webdunia
webdunia

ತೆಂಗಿನೆಣ್ಣೆಯಿಂದ ಹಲ್ಲುಜ್ಜಿದರೆ ಏನಾಗುತ್ತದೆ ಗೊತ್ತಾ?

ತೆಂಗಿನೆಣ್ಣೆಯಿಂದ ಹಲ್ಲುಜ್ಜಿದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಸೋಮವಾರ, 1 ಜುಲೈ 2019 (09:11 IST)
ಬೆಂಗಳೂರು : ತೆಂಗಿನೆಣ್ಣೆಯನ್ನು ಅಡುಗೆ ಮಾಡಲು ಬಳಸುತ್ತಾರೆ. ಇದರಿಂದ ಮಾಡಿದ ಅಡುಗೆ ರುಚಿಯಾಗಿ, ಪರಿಮಳಯುಕ್ತವಾಗಿರುತ್ತದೆ. ಈ ತೆಂಗಿನೆಣ್ಣೆ ಆರೋಗ್ಯಕ್ಕೂ ಕೂಡ ಉತ್ತಮ.




ಅಷ್ಟೇ ಅಲ್ಲ ತೆಂಗಿನ ಎಣ್ಣೆಯನ್ನು ಹಲ್ಲು ಉಜ್ಜಲು ಸಹ ಬಳಸಬಹುದು. ಟೂತ್ ಪೇಸ್ಟ್ ನಲ್ಲಿ ಟ್ರೈಕ್ಲೋಸೋನ್ ಎಂಬ ಆಂಟಿ ಬ್ಯಾಕ್ಟಿರಿಯಾ ಅಂಶ ಇರುತ್ತದೆ. ಇದರಲ್ಲಿರುವ ರಾಸಾಯನಿಕವು ದೇಹದಲ್ಲಿರುವ ಬ್ಯಾಕ್ಟಿರಿಯಾಗಳ ಮೇಲೆ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಹಾಗೂ ದೇಹದಲ್ಲಿರುವ ಎಂಡೋ ಕ್ರಯ್ನ್ ಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಟೂತ್ ಪೇಸ್ಟ್ ನಲ್ಲಿರುವ ಫ್ಲೋರೈಡ್ ಅಂಶವು ಸಹ ದೇಹಕ್ಕೆ ಒಳ್ಳೆಯದಲ್ಲ.


ಆದರೆ ತೆಂಗಿನ ಎಣ್ಣೆಯಿಂದ ಹಲ್ಲುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಮೂರು ಸ್ಪೂನ್ ತೆಂಗಿನ ಎಣ್ಣೆ,ಒಂದು ಹನಿ ಪುದಿನ ಎಣ್ಣೆ ಹಾಗೂ ಎರಡು ಸ್ಪೊನ್ ಬೇಕಿಂಗ್ ಸೋಡಾ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಅದನ್ನು ಪ್ರತಿದಿನ ಬ್ರಷ್ ಮಾಡುವಾಗ ಉಪಯೋಗಿಸಿ. ಇದರಲ್ಲಿಸ್ವಾಭಾವಿಕವಾದ ಆಂಟಿ ಬ್ಯಾಕ್ಟಿರಿಯಾ ಗುಣಗಳಿದ್ದು ಇದು ಅಪಾಯಕಾರಿ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತವೆ. ದಂತ ಸವಕಳಿಯನ್ನು ತಡೆಯುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಶೃಂಗಾರದ ಉತ್ತುಂಗಕ್ಕೇರಲು ಪುರುಷರು ಹೀಗೆ ಮಾಡಬೇಕು