Select Your Language

Notifications

webdunia
webdunia
webdunia
webdunia

ಹೊಟ್ಟೆಯಿಂದ ತಲೆಬುರಡೆಯಲ್ಲಿ ಉಂಟಾಗುವ ನವೆಗೆ ಈ ಮನೆಮದ್ದನ್ನು ಬಳಸಿ

ಹೊಟ್ಟೆಯಿಂದ ತಲೆಬುರಡೆಯಲ್ಲಿ ಉಂಟಾಗುವ ನವೆಗೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಭಾನುವಾರ, 30 ಜೂನ್ 2019 (06:46 IST)
ಬೆಂಗಳೂರು : ಹೇನಿನಿಂದ ಅಥವಾ ತಲೆಹೊಟ್ಟಿನಿಂದ ತಲೆಬುರಡೆಯಲ್ಲಿ ನವೆ ಉಂಟಾಗುತ್ತದೆ. ಈ ನವೆಯಿಂದ ಕೆಲವೊಮ್ಮೆ ಗಾಯ ಕೂಡ ಆಗಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.



* ಆಪಲ್ ಸೈಡರ್ ವಿನೆಗರ್ ಅನ್ನು 1 ಕಪ್ ಬೆಚ್ಚಗಿನ ನೀರಿನಲ್ಲಿ ಮಿಶ್ರಮಾಡಿ, ನಿಮ್ಮ ಕೂದಲನ್ನು ತೊಳೆದುಕೊಂಡು ಈ ಮಿಶ್ರಣವನ್ನು ನೆತ್ತಿಗೆ 5 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ. ನಂತರ ನೀರಿನಿಂದ ತೊಳೆಯಿರಿ ,ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ಪರಿಹಾರವನ್ನು ಬಳಸಿ.


* ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ 5 ರಿಂದ 10 ನಿಮಿಷಗಳ ಕಾಲ ನಿಮ್ಮ ನೆತ್ತಿಯ ಮೇಲೆ ಹಚ್ಚಿ ಮಸಾಜ್ ಮಾಡಿ , ವಾರಕ್ಕೆ 3 ಬಾರಿ ಈ ರೀತಿ ಮಾಡಿ.


* ಅಲೋ ವೆರಾ ಜೆಲ್ ಅನ್ನು ವಿಟಮಿನ್ ಇ ಎಣ್ಣೆ ಗೆ ಸೇರಿಸಿ ತಲೆಬುರುಡೆಯ ಮೇಲೆ ಹಚ್ಚಿ ಕನಿಷ್ಠ 1 ಗಂಟೆ ಕಾಲ ನಿಮ್ಮ ನೆತ್ತಿಯ ಮೇಲೆ ಅದನ್ನು ಬಿಡಿ. ಬಳಿಕ ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ, ವಾರದಲ್ಲಿ 2 ಅಥವಾ 3 ಬಾರಿ ಮಾಡಿ.


* ನಿಂಬೆ ರಸವನ್ನು ½ ಟೀಚಮಚ ಬೆಚ್ಚಗಿನ 1 ಚಮಚ ಆಲಿವ್ ತೈಲದದಲ್ಲಿ ಮಿಶ್ರಮಾಡಿ. ಅದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ ಒಂದು ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ, ವಾರದಲ್ಲಿ 2 ಅಥವಾ 3 ಬಾರಿ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ರೆಪ್ಪೆಗಳು ದಪ್ಪವಾಗಿ ಬೆಳೆಯಬೇಕೆಂದರೆ ಈ ಮನೆಮದ್ದನ್ನು ಬಳಸಿ.