Select Your Language

Notifications

webdunia
webdunia
webdunia
Saturday, 5 April 2025
webdunia

ರಕ್ತ ಬರುವಂತೆ ತುರಿಕೆಯಾಗುತ್ತಿದೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ

Skin

Krishnaveni K

ಬೆಂಗಳೂರು , ಸೋಮವಾರ, 29 ಜುಲೈ 2024 (14:51 IST)
ಬೆಂಗಳೂರು: ಕೆಲವೊಂದು ಹವಾಗುಣದಲ್ಲಿ ಮತ್ತು ಕೆಲವೊಂದು ಚರ್ಮದ ಮಾದರಿ ಇರುವವರಿಗೆ ಅತಿಯಾದ ತುರಿಕೆಯಾಗುವ ಸಮಸ್ಯೆ ಕಂಡುಬರುತ್ತವೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮನೆ ಮದ್ದು ಮಾಡಬಹುದು ಇಲ್ಲಿ ನೋಡಿ.

ತುರಿಕೆ ಕೆಲವೊಮ್ಮೆ ಎಷ್ಟಿರುತ್ತದೆ ಎಂದರೆ ಚರ್ಮ ಹರಿದು ರಕ್ತ ಬರುವಷ್ಟು. ಎಷ್ಟೇ ತುರಿಸಿದರೂ ಮನಸ್ಸಿಗೆ ಸಮಾಧಾನವೆನಿಸುವುದಿಲ್ಲ. ಕೈ ತೆಗೆಯಲೂ ಮನಸ್ಸಾಗದಷ್ಟು ತುರಿಕೆಯಾಗುತ್ತಿರುತ್ತದೆ. ಇದರಿಂದ ಚರ್ಮದಲ್ಲಿ ಕಲೆಗಳಾಗಿ ಅಸಹ್ಯವಾಗಿ ಕಾಣಬಹುದು.

ಅತಿಯಾಗಿ ತುರಿಕೆಯಾಗಲು ಮುಖ್ಯವಾಗಿ ಎರಡು ಕಾರಣಗಳಿರಬಹುದು. ಒಣ ಚರ್ಮದವರಿಗೆ (ಡ್ರೈ ಸ್ಕಿನ್) ತುರಿಕೆ ಕಂಡುಬರುವ ಸಾಧ್ಯತೆಯಿದೆ. ಇನ್ನು ಕೆಲವರಿಗೆ ಶೀತ ಹವಾಗುಣದಲ್ಲಿ ಚರ್ಮ ಒಣಗಿದಂತಾಗಿ ತುರಿಕೆ ಕಂಡುಬರಬಹುದು. ಇವು ಎರಡು ಮುಖ್ಯ ಕಾರಣವಾದರೆ ಚರ್ಮದಲ್ಲಿ ಬ್ಯಾಕ್ಟೀರಿಯಾದಿಂದಾಗಿ ತುರಿಕೆ ಕಂಡುಬರುವ ಸಾಧ್ಯತೆಯಿದೆ.

ಇಂತಹ ಸಂದರ್ಭದಲ್ಲಿ ಆ ಜಾಗಕ್ಕೆ ಕೊಬ್ಬರಿ ಎಣ್ಣೆ ಅಥವಾ ಬೇವಿನ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ. ಈ ಎರಡರಲ್ಲೂ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಿ ಚರ್ಮದ ಆರೋಗ್ಯ ಕಾಪಾಡುವ ಗುಣವಿದೆ. ಒಂದು ವೇಳೆ ಒಣ ಚರ್ಮದ ಸಮಸ್ಯೆಯಿಂದಾಗಿ ತುರಿಕೆಯಾಗುತ್ತಿದ್ದರೂ ಈ ಎರಡು ಎಣ್ಣೆ ಸಮಸ್ಯೆ ನಿವಾರಿಸುವ ಗುಣ ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸ ಮಾಡಿ. ಇದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಒದ್ದೆಯಾಗಿರುವಾಗ ಈ ತಪ್ಪುಗಳನ್ನು ಮಾಡಬೇಡಿ