ಬೆಂಗಳೂರು: ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ ಕುಡಿಯುವುದು ಎಲ್ಲರಿಗೂ ಇಷ್ಟವಾಗಬಹುದು. ಆದರೆ ಕೆಲವರಿಗೆ ಪ್ರತಿನಿತ್ಯ ಅತಿಯಾದ ಬಿಸಿ ಚಹಾ ಸೇವಿಸುವ ಅಭ್ಯಾಸವಿರುತ್ತದೆ. ಆದರೆ ಇದು ನಮ್ಮ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎಂದು ಗಮನಿಸಬೇಕು.
ಆಹಾರವನ್ನು ಬಿಸಿಯಾಗಿರುವಾಗಲೇ ಸೇವಿಸಬೇಕು. ಅದರಲ್ಲೂ ಮಳೆಗಾಲದಲ್ಲಿ ಬೆಚ್ಚಗಿನ ಪಾನೀಯ ಸೇವನೆಯಿಂದ ದೇಹವೂ ಬೆಚ್ಚಗಾಗುವುದು. ಆದರೆ ಚಹಾ ಯಾವಾಗಲೂ ಹದ ಬಿಸಿಯಾಗಿ ಸೇವನೆ ಮಾಡುವುದರಿಂದ ಯಾವುದೇ ಸಮಸ್ಯೆಯಾಗಲ್ಲ. ಇದು ಆರೋಘ್ಯಕ್ಕೂ ಉತ್ತಮ.
ಆದರೆ ಪ್ರತಿನಿತ್ಯ ಅತಿಯಾದ ಬಿಸಿ ಚಹಾ ಸೇವನೆ ಮಾಡುವುದರಿಂದ ಗಂಟಲು, ನಾಲಿಗೆ ಸುಟ್ಟು ಹೋಗುವುದು, ಕ್ಯಾನ್ಸರ್ ನಂತಹ ಮಾರಕ ರೋಗಕ್ಕೂ ಕಾರಣವಾಗಬಹುದು. ನಿಯಮಿತವಾಗಿ ಅತಿ ಬಿಸಿ ಚಹಾ ಸೇವನೆ ಮಾಡುವುದರಿಂದ ಜೊತೆಗೆ ಧೂಮಪಾನ ಅಥವಾ ಮದ್ಯಪಾನದಂತಹ ದುರಾಭ್ಯಾಸಗಳಿದ್ದರೆ ಅನ್ನನಾಳದ ಕ್ಯಾನ್ಸರ್ ಅಪಾಯಗಳೂ ಇವೆ.
ಅಷ್ಟೇ ಅಲ್ಲ, ಅತಿಯಾದ ಬಿಸಿ ಚಹಾ ಸೇವನೆ ಮಾಡುವುದರಿಂದ ನಾಲಿಗೆ ಸುಟ್ಟು ನಿಮ್ಮ ಸಹಜ ರುಚಿ ಹಾಳಾಗಬಹುದು. ಅಥವಾ ನಾಲಿಗೆಯಲ್ಲಿ ಉರಿ, ಗುಳ್ಳೆಯಂತಹ ಸಮಸ್ಯೆಗಳು ಬರಬಹುದು. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಈ ಅಪಾಯ ಹೆಚ್ಚು. ಹೀಗಾಗಿ ಚಹಾ ಹದ ಬಿಸಿಯಾಗಿರುವಾಗ ಸೇವನೆ ಮಾಡಿದರೆ ಉತ್ತಮ.