Select Your Language

Notifications

webdunia
webdunia
webdunia
webdunia

ಮೆದುಳು ತಿನ್ನುವ ಅಮೀಬಿಯಾ ಕಾಯಿಲೆಯ ಲಕ್ಷಣಗಳು ಹೀಗಿರುತ್ತವೆ

Brain

Krishnaveni K

ಬೆಂಗಳೂರು , ಮಂಗಳವಾರ, 9 ಜುಲೈ 2024 (09:15 IST)
ಬೆಂಗಳೂರು: ಕೇರಳದಲ್ಲಿ ಕಂಡುಬಂದಿರುವ ಮೆದುಳು ತಿನ್ನುವ ಅಮೀಬಿಯಾ ಕಾಯಿಲೆ ಈಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲೂ ಈ ರೋಗದ ಭೀತಿ ಮನೆ ಮಾಡಿದೆ. ಇದರ ಲಕ್ಷಣಗಳೇನು ತಿಳಿದುಕೊಳ್ಳಿ.

ಈ ರೋಗ ಬಂದರೆ ಸಾವೇ ಗತಿ ಎನ್ನುವ ಆತಂಕ ಜನರಿಗೆ ಶುರುವಾಗಿದೆ. ಈಗಾಗಲೇ ಕೇರಳದಲ್ಲಿ ಈ ಕಾಯಿಲೆಗೆ ತುತ್ತಾದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಹೀಗಾಗಿ ಈ ಸೋಂಕು ರೋಗದ ಬಗ್ಗೆ ಜನರಲ್ಲಿ ಭೀತಿ ಮನೆ ಮಾಡಿದೆ. ಹೀಗಾಗಿ ಇದರ ರೋಗ ಲಕ್ಷಣ ತಿಳಿಯುವುದು ಅಗತ್ಯವಾಗಿದೆ.

ಮೆದುಳನ್ನು ತಿನ್ನುವ ವಿಚಿತ್ರ ಏಕಾಣು ಜೀವಿಯು ಮನುಷ್ಯನ ಜೀವಕ್ಕೇ ಅಪಾಯ ತಂದೊಡ್ಡಬಲ್ಲದು. ಈ ರೋಗ ಆರಂಭದಲ್ಲಿ ಸಾಮಾನ್ಯ ಜ್ವರದಂತೆ ಅನಿಸಿದರೂ ಬಳಿಕ ಹಂತ ಹಂತವಾಗಿ ಮನುಷ್ಯ ಸಾವಿನ ದವಡೆಗೆ ತಲುಪುತ್ತಾನೆ. ನೆಗ್ಲೆರಿಯಾ ಫಾವ್ಲೆರಿ ಎಂಬ ನದ ಅಥವಾ ಕೆರೆಗಳಲ್ಲಿ ಕಂಡುಬರುವ ಅಮೀಬಿಯಾದಿಂದ ಈ ರೋಗ ಬರುತ್ತದೆ. ನದಿ ಅಥವಾ ಕೆರೆಯಲ್ಲಿ ಈಜಾಡುವಾಗ ಅಥವಾ ನೀರು ಕುಡಿದಾಗ ಮೂಗಿನ ಮೂಲಕ ಮೆದುಳು ಪ್ರವೇಶಿಸಿ ಮೆದುಳಿನ ಜೀವಕೋಶಗಳಿಗೆ ಹಾನಿ ಉಂಟುಮಾಡುತ್ತದೆ. ಕ್ರಮೇಣ ಮೆದುಳಿನ ಜೀವಕೋಶಗಳು ಊದಿಕೊಂಡು ವ್ಯಕ್ತಿ ಜೀವ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಾನೆ.

ಈ ಸೋಂಕಿಗೆ ತುತ್ತಾದವರಲ್ಲಿ ಮೊದಲು ತಲೆನೋವು ಕಾಣಿಸಿಕೊಳ್ಳುತ್ತದೆ. ಬಳಿಕ ಜ್ವರ, ವಾಂತಿ ಸೇರಿದಂತೆ ಸಾಮಾನ್ಯ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಮಾನಸಿಕ ಅಸ್ವಸ್ಥತೆ, ಗುರುತಿಸಲು ಕಷ್ಟವಾಗುವುದು ಇತ್ಯಾದಿ ಸಮಸ್ಯೆ ಬರಬಹುದು. ಈ ರೋಗಕ್ಕೆ ಇನ್ನೂ ಸೂಕ್ತ ಚಿಕಿತ್ಸೆ ಕಂಡುಕೊಳ್ಳಲಾಗಿಲ್ಲ. ಹೀಗಾಗಿ ಮಳೆಗಾಲದಲ್ಲಿ ಕೆರೆ, ನದಿಗಳಲ್ಲಿ ಈಜುವ ಅಭ್ಯಾಸವನ್ನು ಬಿಡುವುದು ಒಳ್ಳೆಯದು.

Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೆ ಬೇಗನೇ ಕೋಪ ಬರುತ್ತಿದ್ದರೆ ಅದಕ್ಕೆ ಕಾರಣ ಈ ಕೊರತೆ ಇರಬಹುದು