ಬೆಂಗಳೂರು: ಹಳೆಯ ಕಾಲದಲ್ಲಿ ನೀರನ್ನು ಮಣ್ಣಿನ ಪಾತ್ರೆಯಲ್ಲೇ ಸಂಗ್ರಹಿಸಿಡಲಾಗುತ್ತಿತ್ತು. ಆದರೆ ಈಗ ಮಣ್ಣಿನ ಪಾತ್ರದ ಬಳಕೆ ಕಡಿಮೆ. ಆದರೆ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಕುಡಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?
ಮಣ್ಣಿನ ಪಾತ್ರೆ ಮಾಡಲು ಯಾವುದೇ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಹೀಗಾಗಿ ಇದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಯೋಗ್ಯವಾಗಿದೆ. ಮಣ್ಣಿನಲ್ಲಿ ಅನೇಕ ಖನಿಜಾಂಶಗಳಿದ್ದು, ಇದರಲ್ಲಿ ಸಂಗ್ರಹಿಸಿದ ನೀರನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ಉಪಯೋಗಗಳಿವೆ.
ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಫ್ರಿಡ್ಜ್ ನಲ್ಲಿ ಸಂಗ್ರಹಿಸಿಟ್ಟಂತೆ ನೈಸರ್ಗಿಕವಾಗಿ ತಂಪಾಗಿರುತ್ತದೆ. ಮಣ್ಣಿನ ಪಾತ್ರೆಯಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳುವುದರಿಂದ ನೀರು ಶುದ್ಧವಾಗಿರುತ್ತದೆ ಮತ್ತು ನೀರಿನಲ್ಲಿರುವ ಖನಿಜಾಂಶಗಳು ನಷ್ಟವಾಗದಂತೆ ನೋಡಿಕೊಳ್ಳುತ್ತದೆ.
ಆಯುರ್ವೇದದ ಪ್ರಕಾರವೂ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಸೇವಿಸುವುದು ಅತ್ಯಂತ ಆರೋಗ್ಯಕರವಾಗಿದೆ. ಆಯುರ್ವೇದದ ಪ್ರಕಾರ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದರಿಂದ ಕಫ ದೋಷಗಳು ನಿವಾರಣೆಯಾಗುತ್ತವೆ ಮತ್ತು ಬಾರದಂತೆ ತಡೆಗಟ್ಟುತ್ತದೆ. ಜೊತೆಗೆ ನೀರಿನಲ್ಲಿರುವ ಖನಿಜಾಂಶಗಳು ಕೊಂಚವೂ ನಷ್ಟವಾಗದೇ ನಮ್ಮ ದೇಹ ಸೇರುತ್ತದೆ.