Publish Date: Mon, 07 Dec 2020 (10:18 IST)
Updated Date: Mon, 07 Dec 2020 (10:19 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತದೆ. ಇದಕ್ಕೆ ನಮ್ಮ ಜೀವನಶೈಲಿ, ಹಾರ್ಮೋನ್ ಗಳು ಕಾರಣವಾಗಿರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಪ್ರತಿ ಬಾರಿ ಸ್ನಾನ ಮಾಡುವಾಗ ಹೀಗೆ ಮಾಡಿ.
ನೀವು ತಲೆಗೆ ಎಣ್ನೆ ಮಸಾಜ್ ಮಾಡುವಾಗ ಬಳಸುವಂತಹ ಎಣ್ಣೆಗೆ ಸ್ವಲ್ಪ ನೆಲ್ಲಿಕಾಯಿ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಮಸಾಜ್ ಮಾಡಿ ಸ್ನಾನ ಮಾಡಿ. ಹಾಗೇ ಪ್ರತಿ ಬಾರಿ ಸ್ನಾನ ಮಾಡುವಾಗ ಸ್ನಾನ ಮಾಡುವ ನೀರಿಗೆ ಪೇರಲೆ ಎಲೆಗಳನ್ನು ಪುಡಿಮಾಡಿ ಬೆರೆಸಿ ತಲೆ ಸ್ನಾನ ಮಾಡಿ. ಇದರಿಂದ ಕೂದಲು ಕಪ್ಪಾಗಿಯೇ ಇರುತ್ತದೆ.