Select Your Language

Notifications

webdunia
webdunia
webdunia
webdunia

ಹೆಚ್.ಡಿಕೆ ಟೀಕಾಸ್ತ್ರಕ್ಕೆ ಕಾಂಗ್ರೆಸ್ ನಿಂದ ಕಡೆಗಣನೆ

webdunia
ಬೆಂಗಳೂರು , ಭಾನುವಾರ, 6 ಡಿಸೆಂಬರ್ 2020 (15:36 IST)
ಬೆಂಗಳೂರು : ಹೆಚ್.ಡಿಕೆ ಟೀಕಾಸ್ತ್ರಕ್ಕೆ ಕಾಂಗ್ರೆಸ್ ನಿಂದ ಕಡೆಗಣನೆಯ ಪ್ರತ್ಯಾಸ್ತ್ರ. ಹೆಚ್.ಡಿಕೆ ಹೇಳಿಕೆ ಲೂಸ್ ಟಾಕ್ ಎಂದು ಕಡೆಗಣಿಸಲು ನಿರ್ಧಾರ ಮಾಡಲಾಗಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ  ಈ ಬಗ್ಗೆ ತೀರ್ಮಾನ ಮಾಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ, ಹೇಳಿಕೆ ಲೂಸ್ ಟಾಕ್ ಎಂದು ಪರಿಗಣಿಸಿ ನೆಗ್ಲೆಟ್ ಮಾಡೊಣ.  ಯಾವ ಹಿರಿಯ ನಾಯಕರೂ ಇದಕ್ಕೆ ಪ್ರತಿಕ್ರಿಯಿಸುವುದು ಬೇಡ. ಕೇವಲ ಶಾಸಕರು ಮಾತ್ರ ಹೆಚ್.ಡಿಕೆಗೆ ಉತ್ತರ ಕೊಟ್ಟರೆ ಸಾಕು. ಇಲ್ಲದಿದ್ರೆ ಕುಮಾರಸ್ವಾಮಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸ್ತಾರೆ. ಇದನ್ನೇ ಆಡಳಿತರೂಡಿ ಬಿಜೆಪಿ ಕೂಡ ಲಾಭ ಮಾಡಿಕೊಳ್ಳಲಿದೆ. ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರದಲ್ಲಿ ಜೆಡಿಎಸ್ ಪಕ್ಷದ ನಾಯಕರು ನಮಗೆ ಕೈ ಕೊಡುವುದು ಖಚಿತ. ಜೆಡಿಎಸ್ ಮೋಸ ಮಾಡಿದೆ ಎಂಬುದನ್ನೇ ಪ್ರಚಾರ ಮಾಡಬೇಕು ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಿ ಮತ್ತೊಬ್ಬಳ ತೆಕ್ಕೆಯಲ್ಲಿದ್ದ: ಮುಂದೇನಾಯ್ತು?