Select Your Language

Notifications

webdunia
webdunia
webdunia
webdunia

ಯಾವುದೇ ಕಾರಣಕ್ಕೂ ಹಾಲಿನ ಜೊತೆಗೆ ಈ ಆಹಾರವನ್ನು ಸೇವಿಸಬೇಡಿ

ಯಾವುದೇ ಕಾರಣಕ್ಕೂ ಹಾಲಿನ ಜೊತೆಗೆ ಈ ಆಹಾರವನ್ನು ಸೇವಿಸಬೇಡಿ
ಬೆಂಗಳೂರು , ಶನಿವಾರ, 2 ಫೆಬ್ರವರಿ 2019 (09:42 IST)
ಬೆಂಗಳೂರು : ಕೆಲವರಿಗೆ ಪ್ರತಿದಿನ ಹಾಲು ಕುಡಿಯುವ ಅಭ್ಯಾಸವಿರುತ್ತದೆ. ಈ ಅಭ್ಯಾಸ ತುಂಬಾ ಒಳ್ಳೇಯದು. ಆದರೆ ಹಾಲಿನ ಜೊತೆಗೆ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಯಾಕೆಂದರೆ ಇದು ಆರೋಗ್ಯವನ್ನು ಉತ್ತಮಗೊಳಿಸುವ ಬದಲು ಹಾಳುಮಾಡುತ್ತದೆ. ಆ ಆಹಾರಗಳು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ.


*ಹಾಲಿನ ಜೊತೆ ಉಪ್ಪಿನ ಅಂಶ ವಿರುವ ಚಿಪ್ಸ್‌, ಮಿಕ್ಷರ್‌, ಲೇಸ್‌ ಮೊದಲಾದ ಆಹಾರ ಸೇವನೆ ಮಾಡುವುದು ಹಾನಿಕಾರಕ, ಇದರಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವ ಕಾರಣ ಹಾಲಿನ ಪ್ರೊಟೀನ್‌ ನಿಮ್ಮ ದೇಹಕ್ಕೆ ಸೇರುವುದಿಲ್ಲ. ಜೊತೆಗೆ ಸ್ಕಿನ್‌ಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.


*ಈರುಳ್ಳಿ ಜೊತೆಗೆ ಹಾಲನ್ನು ಸೇವನೆ ಮಾಡಬೇಡಿ. ಒಂದು ವೇಳೆ ಸೇವಿಸಿದರೆ ತುರಿಕೆ, ಇನ್‌ಫೆಕ್ಷನ್‌, ಮೊದಲಾದ ಸ್ಕಿನ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ.



* ಉದ್ದಿನ ಬೇಳೆಯಿಂದ ಮಾಡಿದ ಆಹಾರದ ಜೊತೆಗೆ ಹಾಲನ್ನು ಸೇವಿಸಿದರೆ ಅಜೀರ್ಣ ಮತ್ತು ಗ್ಯಾಸ್‌ ಸಮಸ್ಯೆ ಉಂಟಾಗುತ್ತದೆ. ಹಾಗೇ ಮೀನಿನ ಜೊತೆ ಸೇವಿಸಿದರೆ ಗ್ಯಾಸ್‌, ಅಲರ್ಜಿ ಜೊತೆಗೆ ಸ್ಕಿನ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ.


* ಮೆಣಸು ಅಥವಾ ಮಸಾಲೆ ಪದಾರ್ಥದ ಜೊತೆಗೂ ಹಾಲು ಸೇವನೆ ಮಾಡಬೇಡಿ. ಯಾಕೆಂದರೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನೋವು, ಆಸಿಡಿಟಿ, ಗ್ಯಾಸ್‌, ವಾಂತಿ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.


* ಮೊಸರಿನ ಜೊತೆ ಹಾಲನ್ನು ಸೇವಿಸಬಾರದು. ಇದರಿಂದ ಗ್ಯಾಸ್‌, ವಾಂತಿ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗೇ ನಿಮಗೆ ಶೀತ, ಕೆಮ್ಮು, ನೆಗಡಿ ಮೊದಲಾದ ಸಮಸ್ಯೆ ಇದ್ದರೆ ಹಾಲಿನ ಜೊತೆಗೆ ಬಾಳೆಹಣ್ಣು ಸೇವನೆ ಮಾಡಬೇಡಿ. ಇದರಿಂದ ಕಫ ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನ್ನ ಮಾಡಲು ಬಳಸುವ ಅಕ್ಕಿಯಿಂದ ಈ 8 ರೋಗಗಳಿಂದ ಮುಕ್ತಿಹೊಂದಬಹುದು