Publish Date: Fri, 05 Jul 2019 (08:50 IST)
Updated Date: Fri, 05 Jul 2019 (08:53 IST)
ಬೆಂಗಳೂರು: ಗಂಡ-ಹೆಂಡತಿ ನಡುವೆ ಲೈಂಗಿಕ ಸಂಬಂಧ ಚೆನ್ನಾಗಿರಬೇಕು, ಹೆಚ್ಚು ಆತ್ಮೀಯತೆ ಬೆಳೆಯಬೇಕು ಎಂದರೆ ಇಬ್ಬರೂ ಜತೆಯಾಗಿ ಪಾತ್ರೆ ತೊಳೆಯಬೇಕಂತೆ!
ಪಾತ್ರೆ ತೊಳೆಯುವುದು ಮಾತ್ರವಲ್ಲ, ಅಡುಗೆ ಕೆಲಸ, ಮನೆಗೆಲಸಗಳಲ್ಲಿ ಹೆಂಡತಿಗೆ ಜತೆಯಾಗಿ ಕೆಲಸ ಮಾಡುವ ದಂಪತಿ ನಡುವೆ ಲೈಂಗಿಕ ಸಂಬಂಧ ಚೆನ್ನಾಗಿರುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಇದಕ್ಕೆ ಕಾರಣ ಈ ರೀತಿ ಮನೆಗೆಲಸಗಳನ್ನು ಹಂಚಿಕೊಂಡು ಮಾಡುವುದರಿಂದ ಇಬ್ಬರೂ ಹೆಚ್ಚು ಅರ್ಥ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಮಹಿಳೆಗೆ ಹೆಚ್ಚ ಒತ್ತಡ, ಸುಸ್ತು ಅರಿವಿಗೆ ಬರುವುದಿಲ್ಲ ಎಂದು ಅಧ್ಯಯನ ವರದಿ ಹೇಳಿದೆ.