ಮಕ್ಕಳಿಗೆ ಎಣ್ಣೆ ಮಸಾಜ್ ಮಾಡುವುದರ ಲಾಭವೇನು?

Webdunia
ಗುರುವಾರ, 11 ಜನವರಿ 2018 (09:15 IST)
ಬೆಂಗಳೂರು: ಚಿಕ್ಕ ಮಕ್ಕಳಿಗೆ ಮೈಯೆಲ್ಲಾ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿ ನಂತರ ಕಾಲ ಮೇಲೆ ಹಾಕಿ ಬಿಸಿ ಬಿಸಿ ನೀರು ಸುರಿದು ಸ್ನಾನ ಮಾಡಿಸುವ ಖುಷಿಯನ್ನು ನಾವು ಎಲ್ಲರೂ ಅನುಭವಿಸಿರುತ್ತೇವೆ. ಆದರೆ ಇದರಿಂದ ಮಗುವಿಗೆ ಎಷ್ಟೊಂದು ಲಾಭವಿದೆ ಗೊತ್ತಾ?
 

ನಿದ್ರೆ
ಮೈಯೆಲ್ಲಾ ಮಸಾಜ್ ಮಾಡುವುದರಿಂದ ಮಗುವಿಗೆ ಸ್ನಾನವಾದ ನಂತರ ಒಳ್ಳೆಯ ನಿದ್ರೆ ಬರುತ್ತದೆ. ಚಿಕ್ಕ ಮಕ್ಕಳಿಗೆ ನಿದ್ರೆ ತುಂಬಾ ಮುಖ್ಯ. ಯಾಕೆಂದರೆ ಅವರ ಬೆಳವಣಿಗೆ ನಡೆಯುವುದೇ ನಿದ್ರೆಯ ಸಮಯದಲ್ಲಿ. ಹಾಗಾಗಿ ಸುಖ ನಿದ್ರೆ ಅವರ ಆರೋಗ್ಯದ ಗುಟ್ಟು.

ಜೀರ್ಣಕ್ರಿಯೆ
ಒಂದು ನಿರ್ದಿಷ್ಟ ಕ್ರಮದಲ್ಲಿ ಮಸಾಜ್ ಮಾಡುವುದರಿಂದ ಚೆನ್ನಾಗಿ ರಕ್ತ ಸಂಚಾರವಾಗುವುದಲ್ಲದೆ, ಜೀರ್ಣಕ್ರಿಯೆಯೂ ಸುಗಮವಾಗುತ್ತದೆ. ಇನ್ನೂ ಎದ್ದು ಕೂರಲು ಬಾರದ ಮಗುವಿಗೆ ಜೀರ್ಣಕ್ರಿಯೆ ಸುಗಮವಾಗಬೇಕಾದರೆ ಮಸಾಜ್ ಮುಖ್ಯ.

ಸಂಬಂಧ ಗಟ್ಟಿಯಾಗುತ್ತದೆ!
ನಿಮಗೇ ಗೊತ್ತಿರುವಂತೆ ಚಿಕ್ಕವರಿದ್ದಾಗ ನಮಗೆ ಎಣ್ಣೆ ಮಸಾಜ್ ಮಾಡಿದ ಕೈಗಳನ್ನು ನಾವು ದೊಡ್ಡವರಾದ ಮೇಲೂ ಮರೆಯಲ್ಲ. ಅದೊಂಥರಾ ಭಾವನಾತ್ಮಕ ನಂಟು ಬೆಳೆಯುತ್ತದೆ. ಅಮ್ಮನ ಬೆಚ್ಚಗಿನ ಕೈಯಿಂದ ಮಸಾಜ್ ಮಾಡುತ್ತಿದ್ದರೆ, ಮಗುವಿಗೆ ಸುರಕ್ಷಿತ ಭಾವನೆ ಉಂಟಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments