Select Your Language

Notifications

webdunia
webdunia
webdunia
webdunia

ಎಚ್ಚರಿಕೆ! ನೀವು ಸೇವಿಸುವ ಈ ಆಹಾರಗಳು ಕ್ಯಾನ್ಸರ್ ಗೆ ಕಾರಣವಾಗಬಹುದು

ಎಚ್ಚರಿಕೆ! ನೀವು ಸೇವಿಸುವ ಈ ಆಹಾರಗಳು ಕ್ಯಾನ್ಸರ್ ಗೆ ಕಾರಣವಾಗಬಹುದು
ಬೆಂಗಳೂರು , ಶನಿವಾರ, 4 ಮೇ 2019 (06:50 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸಣ‍್ಣ ಮಕ್ಕಳಿಂದ  ವಯಸ್ಕರ ತನಕ ಹೆಚ್ಚಿನವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದ ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ನಾವು ಸೇವಿಸುವ ದೈನಂದಿನ ಆಹಾರಗಳಿಂದಲೇ ಕ್ಯಾನ್ಸರ್​ ಎಂಬ ಮಾರಕಕ್ಕೆ ತುತ್ತಾಗುತ್ತಿದ್ದೇವೆ ಎಂಬ ಶಾಕಿಂಗ್  ಸಂಗತಿಯನ್ನು ವೈದ್ಯಲೋಕ ತಿಳಿದುಬಂದಿದೆ.




ಹೌದು. ನಾವು ಸೇವಿಸುವ ಆಹಾರಗಳು ನಮ್ಮ ದೇಹದಲ್ಲಿ ಕೊಬ್ಬಿನಾಂಶವನ್ನು ಅಧಿಕಗೊಳಿಸಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.


*ಟೊಮ್ಯಾಟೊ ಪೇಸ್ಟ್​ ನ್ನು ದೀರ್ಘಕಾಲದವರೆಗೆ ಹಾಳಾಗದಂತೆ ಇಡಲು ಬಿಸ್ಫೆನಾಲ್-ಎ ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಡಬ್ಬಾದಲ್ಲಿ ಸಿಗುವ ಇಂತಹ ಟೊಮ್ಯಾಟೊ ಪೇಸ್ಟ್​ಗಳನ್ನು ಹೆಚ್ಚಾಗಿ ಬಳಸುವುದರಿಂದ ಕ್ಯಾನ್ಸರ್​ ರೋಗಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ.


*ಮಾಂಸಾಹಾರಗಳನ್ನು ಕೆಡದಂತೆ ಸಂರಕ್ಷಿಸಿಡಲು ಸೋಡಿಯಂ ನೈಟ್ರೈಟ್​ ರಾಸಾಯನಿಕವನ್ನು ಬಳಸುತ್ತಾರೆ. ಈ ರೀತಿಯ ಸಂಸ್ಕರಿಸಿದ ಮಾಂಸವನ್ನು ಸೇವಿಸುವುದರಿಂದ ಕ್ಯಾನ್ಸರ್ ರೋಗಕ್ಕೆ ಗುರಿಯಾಗುತ್ತೀರಿ.


* ಮೈಕ್ರೋವೇವ್​ ನಲ್ಲಿ ತಯಾರಿಸಿದ ಪಾಪ್​ ಕಾರ್ನ್​ ನಲ್ಲಿ ಪರ್ಫ್ಯೂಕ್ಟಾನೊಯಿಕ್ ಎಂಬ ಆ್ಯಸಿಡ್​ ಉತ್ಪತ್ತಿಯಾಗುತ್ತದೆ. ಹೀಗೆ ಸಿದ್ಧಪಡಿಸುವ ಪಾಪ್ ​ಕಾರ್ನ್​ ನಿಂದ ಕ್ಯಾನ್ಸರ್​ ರೋಗದ ಅಪಾಯ ಹೆಚ್ಚಿದೆ.


* ದೀರ್ಘಕಾಲದವರೆಗೆ ಫ್ರಿಜ್​ನಲ್ಲಿಡುವ ಹಣ್ಣುಗಳು ನೋಡಲು ತಾಜಾತಣದಿಂದ ಕೂಡಿರುತ್ತದೆ. ಆದರೆ ಇಂತಹ ಹಣ್ಣುಗಳ ಪದರದ ಮೇಲೆ ರಾಸಾಯನಿಕ ಅಂಶಗಳು ಉಳಿದುಕೊಂಡಿರುತ್ತದೆ. ಇವುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕ್ಯಾನ್ಸರ್ ಸಂಭವಿಸುತ್ತದೆ.


* ಆಲೂಗಡ್ಡೆ ಚಿಪ್ಸ್​ಗಳನ್ನು ಸೋಡಿಯಂ ಹಾಗೂ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತದೆ. ಇದರಿಂದ ಕೂಡ ಕ್ಯಾನ್ಸರ್ ರೋಗ ಉಂಟಾಗಬಹುದು.


* ತರಕಾರಿಗಳು ಮತ್ತು ಸಸ್ಯಗಳಿಂದ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹೈಡ್ರೋಜನೀಕರಿಸಿದ (ಘನೀಕೃತ) ತೈಲಗಳನ್ನು ತೆಗೆಯಲಾಗುತ್ತದೆ. ಇಂತಹ ತೈಲಗಳಲ್ಲಿ ಒಮೆಗಾ-6 ಪ್ರಮಾಣ ಅಧಿಕವಿರುತ್ತದೆ. ಇವುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಸಲಿನ್ ಅನ್ನು ಈ ರೀತಿಯಾಗಿ ಬಳಸಿ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಿ