Select Your Language

Notifications

webdunia
webdunia
webdunia
webdunia

ಲೈಂಗಿಕ ಜೀವನದಲ್ಲಿ ವಯಸ್ಸು ಬಹುಮುಖ್ಯ ಪಾತ್ರ ವಹಿಸುತ್ತದೆ: ಇಲ್ಲಿದೆ ಸಂಶೋಧನೆಯ ವರದಿ ..

ಲೈಂಗಿಕ ಜೀವನದಲ್ಲಿ ವಯಸ್ಸು ಬಹುಮುಖ್ಯ ಪಾತ್ರ ವಹಿಸುತ್ತದೆ: ಇಲ್ಲಿದೆ ಸಂಶೋಧನೆಯ ವರದಿ ..
ವಾಷಿಂಗ್ಟನ್ , ಶನಿವಾರ, 26 ಆಗಸ್ಟ್ 2017 (18:12 IST)
ಮಾನವನ ದಾಂಪತ್ಯ ಜೀವನದಲ್ಲಿ ಸೆಕ್ಸ್ ಬಹುಮುಖ್ಯ ಪಾತ್ರ ವಹಿಸುತ್ತದೆ. ವಯಸ್ಸಾದಂತೆ ಸೆಕ್ಸ್`ನಲ್ಲಿ ಬದಲಾವಣೆ ಕಂಡು ಬರುತ್ತದೆ. ಲೈಂಗಿಕ ಜೀವನದಲ್ಲಾಗುವ ಬದಲಾವಣೆ ಕುರಿತಂತೆ ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ಕಿಂನ್ ಸ್ಲೇ ಇನ್ಸ್`ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಸೆಕ್ಸ್ ರಿಪ್ರೊಡಕ್ಷನ್ 10 ವರ್ಷಗಳ ಸುದೀರ್ಘ ಸಂಶೋಧನೆ ನಡೆಸಿ ವರದಿ ನೀಡಿದೆ.

ಯಾವ ಯಾವ ವಯಸ್ಸಿನಲ್ಲಿ ಲೈಂಗಿಕ ಸಾಮರ್ಥ್ಯ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಈ ಸಂಶೋಧನೆ ಮಾಹಿತಿ ಕಲೆ ಹಾಕಿದೆ. ಸಂಶೋಧನೆಯ ವರದಿ ದಿ ಜರ್ನಲ್ ಆಫ್ ಸೆಕ್ಸ್ ರಿಸರ್ಚ್`ನಲ್ಲಿ ಪ್ರಕಟವಾಗಿದೆ. ವಯಸ್ಸಾದಂತೆ ದೈಹಿಕ ಕಾರಣಗಳಿಂದಾಗಿ ಲೈಂಗಿಕ ಜೀವನದಲ್ಲಿ ಕುಸಿತವಾಗುವುದು ಈ ಸಂಶೋಧನೆಯಲ್ಲಿ ತಿಳಿದು ಬಂದಿದೆ.

30 ವರ್ಷದೊಳಗಿನ ದಂಪತಿ ವಾರಕ್ಕೆ ಎರಡೆರಡು ಬಾರಿ ಮತ್ತು ವರ್ಷಕ್ಕೆ 112ಕ್ಕಿಂತಲೂ ಅಧಿಕ ಬಾರಿ ಲೈಂಗಿಕ ಕ್ರಿಯೆಯಲ್ಲಿ ತಡಗುತ್ತಾರೆ. 30ರಿಂದ 39ವರ್ಷದೊಳಗಿನವರು ವಾರಕ್ಕೆ 1 ಅಥವಾ 2 ಬಾರಿ, ವರ್ಷಕ್ಕೆ 86 ಬಾರಿ ಸೆಕ್ಸ್ ಮಾಡುತ್ತಾರಂತೆ. 40ರಿಂದ 49ವರ್ಷ ವಯಸ್ಸಿನವರು ಕೇವಲ ವರ್ಷಕ್ಕೆ 69 ಬಾರಿ ಸಂಭೀಗದಲ್ಲಿ ತೊಡಗುತ್ತಾರಂತೆ. ಅಂದರೆ, 18-29 ವರ್ಷ ವಯಸ್ಸಿನವರಿಗಿಂತ ಅರ್ಧದಷ್ಟು.  

ಅಮೆರಿಕದ ವಿಜ್ಞಾನಿಗಳು 10 ವರ್ಷಗಳ ಕಾಲ 1170 ಮಂದಿಯನ್ನ ಎರಡೆರಡು ಬಾರಿ ಸಂದರ್ಶನ ಮಾಡಿ ಈ ವರದಿ ಸಿದ್ಧಪಡಿಸಿದ್ದಾರೆ. ಸಂಶೋಧನೆ ವೇಳೆ ಕೆಲ ವಯಸ್ಕರು ಸಹ ಅತೀ ಕಡಿಮೆ ಲೈಂಗಿಕ ಕ್ರಿಯೆ ನಡೆಸುವುದು ಮತ್ತು ವಯಸ್ಸಾದರೂ ಕೆಲವು ನಿಯಮಿತವಾಗಿ ಲೈಂಗಿಕ ಕ್ರಿಯೆಯಲಲಿ ತೊಡಗಿರುವ ಕಂಡುಬಮದಿದೆ. ಇ ಎಲ್ಲ ದತ್ತಾಂಶ ಸಂಗ್ರಹಿಸಿ ಒಟ್ಟಾರೆ ಸರಾಸರಿ ಅಂಕಿ ಅಂಶ ಕಲೆ ಹಾಕಲಾಗಿದೆ. ಬಹುತೇಕ ಎಲ್ಲರಲ್ಲೂ ವಯಸ್ಸು ಲೈಂಗಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಕಂಡು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೊಳ್ಳೆ ಯಾಕೆ ನನ್ನನ್ನೇ ಹೆಚ್ಚು ಕಡಿಯೋದು ಯಾಕೆ?