Publish Date: Wed, 23 Aug 2017 (08:14 IST)
Updated Date: Wed, 23 Aug 2017 (08:18 IST)
ಬೆಂಗಳೂರು: ಒತ್ತಡದ ಜೀವನವೋ, ಸಂಗಾತಿ ಬಗೆಗಿನ ನಿರಾಸಕ್ತಿಯೋ ಒಟ್ಟಾರೆ ಲೈಂಗಿಕಾಸಕ್ತಿ ಕುಂದುತ್ತಿದೆ ಎಂದಾದರೆ ಏನು ಮಾಡಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.
ಹೊರಗಡೆ ಸುತ್ತಾಡಿ
ಸಂಗಾತಿ ಜತೆಗೆ ಹೆಚ್ಚು ಸುತ್ತಾಡಿದ್ದು, ಪರಸ್ಪರರ ಇಷ್ಟಾನಿಷ್ಟಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅದರಲ್ಲೂ ವಿಶೇಷವಾಗಿ ಇಷ್ಟಪಡುವ ಜಾಗಕ್ಕೆ, ಸಿನಿಮಾಗೆ ಜತೆಯಾಗಿ ಹೋದರೆ ಭಾವನೆಗಳು ತೆರೆದುಕೊಳ್ಳುತ್ತವೆ.
ಪ್ರಾಮಾಣಿಕರಾಗಿ
ನಿಮ್ಮ ಜೀವನದಲ್ಲಿ ಬರುವ ಏನೇ ಸಮಸ್ಯೆಗಳು, ಒತ್ತಡಗಳನ್ನು ಸಂಗಾತಿ ಜತೆಗೆ ಹಂಚಿಕೊಳ್ಳಿ. ಒತ್ತಡಗಳನ್ನು ನಮ್ಮೊಳಗೇ ಇಟ್ಟುಕೊಂಡು ಕೊರಗುವುದರಿಂದ ದಾಂಪತ್ಯದಲ್ಲಿ ಖುಷಿ ಪಡಲು ಸಾಧ್ಯವಿಲ್ಲ.
ವ್ಯಾಯಾಮ
ನಿಯಮಿತವಾಗಿ ದೈಹಿಕ ಕಸರತ್ತು ಮಾಡುವುದರಿಂದ ನಮ್ಮಲ್ಲಿರುವ ಸುಪ್ತ ಬಯಕೆಗಳು ಬಡಿದೇಳುತ್ತವೆ. ದೈಹಿಕ ವ್ಯಾಯಾಮದಿಂದ ಸೆಕ್ಸ್ ಹಾರ್ಮೋನ್ ಗಳು ಚುರುಕುಗೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯಕರ ಆಹಾರ
ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸುವುದರಿಂದ ಸಹಜವಾಗಿಯೇ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಸಂಗಾತಿಯನ್ನು ತೃಪ್ತಿಪಡಿಸಬಹುದು. ಅದರಲ್ಲೂ ಮುಖ್ಯವಾಗಿ ಪೋಷಕಾಂಶ ಕೊರತೆಯಿಂದ ಬಳಲುತ್ತಿರುವ ಪುರುಷರಲ್ಲಿ ಲೈಂಗಿಕಾಸಕ್ತಿಯೂ ಕಡಿಮೆ ಎಂದು ಕೆಲವು ಅಧ್ಯಯನಗಳೇ ದೃಢಪಡಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ