Publish Date: Fri, 12 Jul 2019 (15:34 IST)
Updated Date: Fri, 12 Jul 2019 (15:35 IST)
ಋತುಮತಿಯಾಗಿದ್ದಾಗ ಲೈಂಗಿಕ ಕ್ರಿಯೆ ಮಾಡಬಹುದೇ ಎಂಬ ಆತಂಕ ಹಲವು ಮಹಿಳೆಯರನ್ನು ಕಾಡುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಯೋನಿ ಭಾಗ ಸೂಕ್ಷ್ಮವಾಗಿರುತ್ತದೆ ಎಂಬ ಕಾರಣಕ್ಕೆ ಲೈಂಗಿಕ ಕ್ರಿಯೆ ಬೇಡ ಎನ್ನುವುದುಂಟು.
ಆದರೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಕೆಲವು ಲಾಭಗಳೂ ಇವೆ. ಋತುಮತಿಯಾದ ಸಮಯದಲ್ಲಿ ಕಾಡುವ ಹೊಟ್ಟೆ ನೋವು, ಕಾಲಿನ ಸೆಳೆತ ಇತ್ಯಾದಿ ಸಮಸ್ಯೆಗಳಿಗೆ ಲೈಂಗಿಕ ಕ್ರಿಯೆಯೇ ಮದ್ದು ಎನ್ನುತ್ತಾರೆ ಕೆಲವು ಲೈಂಗಿಕ ತಜ್ಞರು.
ಲೈಂಗಿಕ ಕ್ರಿಯೆ ವೇಳೆ ಯೋನಿ ಸಡಿಲವಾಗುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಇದು ನೈಸರ್ಗಿಕ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ.