Select Your Language

Notifications

webdunia
webdunia
webdunia
webdunia

ವೈಕುಂಠ ಏಕಾದಶಿ: ವಿಷ್ಣುವನ್ನು ಪೂಜಿಸುವುದು ಹೇಗೆ?

ವೈಕುಂಠ ಏಕಾದಶಿ: ವಿಷ್ಣುವನ್ನು ಪೂಜಿಸುವುದು ಹೇಗೆ?
ಬೆಂಗಳೂರು , ಗುರುವಾರ, 13 ಜನವರಿ 2022 (08:30 IST)
ಶ್ರೀಹರಿಯನ್ನು ಪೂಜಿಸುವುದರಿಂದ ಮನುಜರ ಪಾಪಗಳು ಕಳೆಯುವ ದಿನ.

ಮನುಷ್ಯ ಜೀವನದ ಪಯಣದ ಹಾದಿಯಲಿ ಸಾಧನೆಗೆ ರಹದಾರಿ ಮಾಡಿಕೊಡುವ ದಿನ. ಈ ದಿನ ಮನದಲಿ ಒಳ್ಳೆಯ ಯಾವುದೇ ಕಾರ್ಯ ಸಂಕಲ್ಪಿಸಿ ಅದೇ ದಾರಿಯಲಿ ಮುಂದುವರಿದರೆ ನಾವು ಯಶಸ್ಸು ಪಡೆಯುತ್ತೇವೆ.

ಉತ್ತರ ದ್ವಾರದಿಂದ ಸ್ವಾಮಿಯ ದರುಶನ ಮಾಡಿದರೆ ಮೋಕ್ಷ ಪ್ರಾಪ್ತಿ ಎಂದು ಹೇಳುತ್ತಾರೆ. ಅದುವೇ ವೈಕುಂಠ ಏಕಾದಶಿ. ಈ ಬಾರಿ ಜನವರಿ 13 ಗುರುವಾರದಂದು ಬಂದಿದೆ.

ಜನವರಿ 12 ಬುಧವಾರ 16.50ಕ್ಕೆ ಏಕಾದಶಿ ತಿಥಿ ಆರಂಭವಾಗುತ್ತದೆ. ಜನವರಿ 13 ಗುರುವಾರ 19:30 ಕ್ಕೆ ಮುಗಿಯುತ್ತದೆ. ಏಕಾದಶಿ ಒಂದೆಡೆಯಾದರೆ, ಇನ್ನೊಂದೆಡೆ ಎರಡು ಯೋಗಗಳ ಸಂಯೋಗವು ಈ ದಿನದ ವಿಶೇಷತೆಯಿದೆ.

ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ವಿಶೇಷ ಮಹತ್ವವಿದೆ. ಏಕಾದಶಿ ವ್ರತವನ್ನು ಆಚರಿಸುವುದರಿಂದ ಒಬ್ಬ ವ್ಯಕ್ತಿಯು ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಮತ್ತು ಮರಣಾನಂತರ ವೈಕುಂಠವನ್ನು ಪಡೆಯುತ್ತಾನೆ ಎಂಬ ಪ್ರತೀತಿ/ ನಂಬಿಕೆಯಿದೆ.

ಪ್ರತಿ ಮಾಸದಲ್ಲಿ ಎರಡು ಏಕಾದಶಿ ಉಪವಾಸಗಳಿವೆ. ಒಂದು ಏಕಾದಶಿ ಉಪವಾಸ ವ್ರತವನ್ನು ಶುಕ್ಲ ಪಕ್ಷದಲ್ಲಿ ಮತ್ತು ಎರಡನೇ ಏಕಾದಶಿ ವ್ರತವನ್ನು ಕೃಷ್ಣ ಪಕ್ಷದಲ್ಲಿ ಆಚರಿಸಲಾಗುವುದು. ಪ್ರತಿ ಏಕಾದಶಿಗೆ ತನ್ನದೇ ಆದ ಮಹತ್ವವಿದೆ.

ಪೌಷ ಅಥವಾ ಆಘನ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಮೋಕ್ಷದಾ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವರ್ಷ ಮೋಕ್ಷದಾ ಏಕಾದಶಿ ವ್ರತವನ್ನು ಜನವರಿ 13 ಗುರುವಾರ ಆಚರಿಸಲಾಗುವುದು. 

ಇದರಿಂದ ಇಷ್ಟಾರ್ಥಗಳು ಈಡೇರುವುದು

ಈ ದಿನದಂದು ಉಪವಾಸವನ್ನು ಆಚರಿಸುವುದರಿಂದ ಮತ್ತು ಉಪವಾಸದ ಕಥೆಯನ್ನು ಕೇಳುವುದರಿಂದ ಭಗವಾನ್ ವಿಷ್ಣುವು ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆಯಿದೆ.

ಏಕಾದಶಿಯಂದು ಮುಂಜಾನೆ ಸ್ನಾನ ಮಾಡಿದ ನಂತರ ಹಳದಿ ಬಟ್ಟೆಯನ್ನು ಧರಿಸಬೇಕೆಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವಿನ ನೆಚ್ಚಿನ ಬಣ್ಣ ಹಳದಿಯಾಗಿರುವುದರಿಂದ ಪೂಜೆಯಲ್ಲಿ ವಿಷ್ಣುವಿಗೆ ಹಳದಿ ಹೂವುಗಳು, ಬಟ್ಟೆಗಳು, ಹಣ್ಣುಗಳು ಇತ್ಯಾದಿಗಳನ್ನು ಅರ್ಪಿಸಬೇಕು.

ಇವುಗಳನ್ನು ಅರ್ಪಿಸಿ

ಏಕಾದಶಿಯ ದಿನದಂದು ಭಗವಾನ್ ವಿಷ್ಣುವಿಗೆ ಪಂಚಾಮೃತದಿಂದ ಅಭಿಷೇಕ ಮಾಡಿ ಮತ್ತು ತುಳಸಿ ಎಲೆಗಳನ್ನು ಅರ್ಪಿಸಿ. ಇದನ್ನು ಮಾಡುವುದರಿಂದಲೂ ಕೂಡ ಶ್ರೀ ಹರಿಯು ಶೀಘ್ರದಲ್ಲೇ ಪ್ರಸನ್ನನಾಗುತ್ತಾನೆ, ಏಕೆಂದರೆ ತುಳಸಿ ಕೂಡ ವಿಷ್ಣುವಿನ ಅತ್ಯಂತ ಪ್ರಿಯವಾದ ವಸ್ತುವಾಗಿದೆ.

ಅರಳಿ ಮರ ಪೂಜೆ

ಏಕಾದಶಿಯಂದು ಅರಳಿ ಮರದ ಬೇರಿಗೆ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಶ್ರೀಹರಿಯು ಅರಳಿ ಮರದ ಮೂಲದಲ್ಲಿ ನೆಲೆಸಿದ್ದಾನೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಅರಳಿ ಮರಕ್ಕೆ ಸೇವೆಯನ್ನು ಸಲ್ಲಿಸಬೇಕು.

ದಾನ

ವೈಕುಂಠ ಏಕಾದಶಿ ಅಥವಾ ಮೋಕ್ಷದಾ ಏಕಾದಶಿ ದಿನದಂದು ಹಳದಿ ವಸ್ತುಗಳನ್ನು ದಾನ ಮಾಡುವುದನ್ನು ಕೂಡ ಬಹಳ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದು ಪುಣ್ಯ ಪ್ರಯೋಜನಗಳನ್ನು ತರುತ್ತದೆ.

ಮಂತ್ರ ಪಠಿಸಿ

ಶಾಸ್ತ್ರಗಳ ಪ್ರಕಾರ ಏಕಾದಶಿಯಂದು ವಿಷ್ಣು ಮಂತ್ರಗಳನ್ನು ಪಠಿಸುವುದು ಮಂಗಳಕರ. ಇದರಿಂದ ಶ್ರೀಹರಿಯ ಕೃಪೆಗೆ ಪಾತ್ರರಾಗಿ ಭಕ್ತರ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವ ನಂಬಿಕೆಯಿದೆ.

ಮಹಾ ವಿಷ್ಣು ಪೂಜೆ

ವೈಕುಂಠ ಏಕಾದಶಿ ಅಥವಾ ಮೋಕ್ಷದಾ ಏಕಾದಶಿ ದಿನದಂದು ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಇಬ್ಬರ ಆಶೀರ್ವಾದವು ಸಿಗುತ್ತದೆ.

ಮೋಕ್ಷದಾ ಏಕಾದಶಿಯಂದು ವಿಷ್ಣು ಚಾಲೀಸಾ ಅನ್ನು ತಪ್ಪದೇ ಪಠಿಸಬೇಕು ಮತ್ತು ವಿಷ್ಣು ಆರತಿಯನ್ನು ಮಾಡುವುದರೊಂದಿಗೆ ವಿಷ್ಣುವಿನ ಶ್ಲೋಕ ಗೀತೆಗಳನ್ನು ಪಠಿಸಬೇಕು. ಇದರಿಂದ ಕೂಡ ಭಗವಾನ್ ವಿಷ್ಣು ತಕ್ಷಣ ಪ್ರಸನ್ನನಾಗುತ್ತಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ತಲೆನೋವಿಗೆ ಈ ಮನೆಮದ್ದುಗಳನ್ನು ಬಳಸಿ