Select Your Language

Notifications

webdunia
webdunia
webdunia
webdunia

ಕಾರ್ಮಿಕ ಸಂಹಿತೆಯ ವಿಶೇಷತೆ ಏನು?

ಕಾರ್ಮಿಕ ಸಂಹಿತೆಯ ವಿಶೇಷತೆ ಏನು?
ನವದೆಹಲಿ , ಬುಧವಾರ, 22 ಡಿಸೆಂಬರ್ 2021 (09:03 IST)
ನವದೆಹಲಿ : ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು ಮತ್ತು ಔದ್ಯೋಗಿಕ ಸುರಕ್ಷತೆ ದೃಷ್ಟಿಯಿಂದ ಮುಂದಿನ ಹಣಕಾಸು ವರ್ಷದಿಂದ ಭಾರತವು 4 ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕೈಗೆ ಕಡಿಮೆ ಸಂಬಳ, ಪಿಎಫ್ ಹೆಚ್ಚಳ
ಹೊಸ ಸಂಹಿತೆಗಳು ಜಾರಿಗೆ ಬಂದರೆ, ನೌಕರರ ಕೈಗೆ ಸಿಗುವ ಸಂಬಳದ ಮೊತ್ತ ಕಡಿಮೆಯಾಗಲಿದ್ದು, ಭವಿಷ್ಯನಿಧಿ ಖಾತೆಗೆ (ಪಿಎಫ್) ಜಮಾ ಆಗುವ ಮೊತ್ತ ಹೆಚ್ಚಳವಾಗಲಿದೆ.

ಎಲ್ಲ ಬಗೆಯ ಭತ್ಯೆಗಳು ನೌಕರರ ಒಟ್ಟು ವೇತನದ ಶೇಕಡ 50ರಷ್ಟನ್ನು ಮೀರುವಂತಿಲ್ಲ. ಅಂದರೆ ಒಟ್ಟು ಸಂಬಳದಲ್ಲಿ ಶೇಕಡ 50ರಷ್ಟು ಭಾಗವು ಮೂಲ ವೇತನ ಆಗಿರಬೇಕು. ಪಿಎಫ್ ಖಾತೆಗೆ ವರ್ಗಾವಣೆ ಆಗುವ ಮೊತ್ತವನ್ನು ನೌಕರರ ಮೂಲವೇತನದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. 

ಉದ್ಯೋಗಿಯ ವೇತನ ತಿಂಗಳಿಗೆ 50,000 ರೂ. ಆಗಿದ್ದರೆ, ಅವರ ಮೂಲ ವೇತನ 25,000 ರೂ. ಆಗಬಹುದು. ಉಳಿದ 25,000 ರೂ. ಭತ್ಯೆಗಳಿಗೆ ಪರಿಗಣಿಸಲಾಗುವುದು.
ಕೇಂದ್ರ ಸರ್ಕಾರವು ಈಗಾಗಲೇ ನಾಲ್ಕು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸಿದೆ. ಈಗ ಏನಿದ್ದರೂ ರಾಜ್ಯಗಳು ತಮ್ಮ ಭಾಗದಲ್ಲಿ ನಿಯಮಗಳನ್ನು ರೂಪಿಸಬೇಕಾಗಿದೆ. 2021ರ ಫೆಬ್ರವರಿಯಲ್ಲಿ ಈ ಸಂಹಿತೆಗಳಿಗೆ ಕರಡು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ಪೂರ್ಣಗೊಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ವಾರದಲ್ಲಿ 4 ದಿನ ಮಾತ್ರ ಕೆಲಸ!