Publish Date: Wed, 22 Dec 2021 (08:52 IST)
Updated Date: Wed, 22 Dec 2021 (09:00 IST)
ನವದೆಹಲಿ : ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು ಮತ್ತು ಔದ್ಯೋಗಿಕ ಸುರಕ್ಷತೆ ದೃಷ್ಟಿಯಿಂದ ಮುಂದಿನ ಹಣಕಾಸು ವರ್ಷದಿಂದ ಭಾರತವು 4 ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಹೊಸ ಸಂಹಿತೆ ಅಡಿಯಲ್ಲಿ ಉದ್ಯೋಗ, ಕೆಲಸದ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಅಂಶಗಳು ಬದಲಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ವಾರದಲ್ಲಿ 5 ದಿನಗಳ ಕೆಲಸ ಇರುತ್ತದೆ.
ಆದರೆ ಹೊಸ ಸಂಹಿತೆಯಲ್ಲಿ ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲು ಅವಕಾಶ ಇರಲಿದೆ. ಆದರೆ 48 ಗಂಟೆಗಳ ಸಾಪ್ತಾಹಿಕ ಕೆಲಸದ ಅವಶ್ಯಕತೆಯನ್ನು ಪೂರೈಸಬೇಕಾಗಿರುವುದರಿಂದ, ನಾಲ್ಕು ದಿನಗಳಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಕಾರ್ಮಿಕ ಇಲಾಖೆ ಸ್ಪಷ್ಟಪಡಿಸಿದೆ.