Webdunia - Bharat's app for daily news and videos

Install App

ಪವಿತ್ರಳ ತಂಗಿಯೂ ಮದ್ವೆ ಆಗು ಅಂತಿದ್ದಾಳೆ…

Webdunia
ಸೋಮವಾರ, 8 ಏಪ್ರಿಲ್ 2019 (18:16 IST)
ಪ್ರಶ್ನೆ: ನಾನು 28 ವರ್ಷದ ಯುವಕ. ಉತ್ತಮ ಉದ್ಯೋಗದಲ್ಲಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ನಾನು ಪವಿತ್ರ ಎಂಬುವಳ ಜತೆ ಪ್ರೇಮದಲ್ಲಿ ಸಿಲುಕಿರುವೆ. ನಾವಿಬ್ಬರೂ ಮದುವೆಯಾಗಬೇಕು ಎಂದುಕೊಂಡಿದ್ದೇವೆ. ಆದರೆ ಕೆಲವು ತಿಂಗಳ ಹಿಂದ ಪವಿತ್ರ ತನ್ನ ತಂಗಿಯನ್ನು ನನಗೆ ಪರಿಚಯ ಮಾಡಿಸಿದಳು. ಆಕೆ ಪವಿತ್ರಳಿಗಿಂತ ಚೆಲುವೆ.

ನನ್ನ ಪ್ರೇಯಸಿ ಪವಿತ್ರಳಿಗೆ ತಿಳಿಯದಂತೆ ಆಕೆಯ ತಂಗಿಯೂ ನನ್ನನ್ನು ಪ್ರೀತಿಸಲು ಶುರುಮಾಡಿದ್ದಾಳೆ. ಅಲ್ಲದೇ ನಾವಿಬ್ಬರೂ ಡೇಟಿಂಗ್ ಕೂಡ ನಡೆಸಿದ್ದೇವೆ. ನನ್ನ ಸಮಸ್ಯೆ ಏನೆಂದರೆ ಪವಿತ್ರಳನ್ನು ಮದುವೆಯಾಗಬೇಕೋ ಅಥವಾ ಅವಳ ತಂಗಿಯನ್ನೋ ಎನ್ನುವ ಗೊಂದಲಕ್ಕೆ ಒಳಗಾಗಿರುವೆ. ಪರಿಹಾರ ತಿಳಿಸಿರಿ.

ಉತ್ತರ: ಹೆಣ್ಣು ಒಬ್ಬನನ್ನೇ ಪ್ರೀತಿಸಿ ಮದುವೆಯಾಗುವ ಸಾವಿರಾರು ಕನಸು ಕಂಡಿರುತ್ತಾಳೆ. ನಿಮ್ಮ ಪವಿತ್ರ ಸಹ ನಿಮ್ಮ ಬಗ್ಗೆ ಬೆಟ್ಟದಷ್ಟು ಆಸೆ, ಪ್ರೀತಿ ಇಟ್ಟುಕೊಂಡಿದ್ದಾಳೆ. ಆದರೆ ನೀವು ಆಕೆಗೆ ಗೊತ್ತಾಗದಂತೆ ಆಕೆಯ ತಂಗಿಯನ್ನೂ ಪ್ರೀತಿಸಲು ಶುರು ಮಾಡಿದ್ದೀರಿ. ಇದರ ಅರ್ಥ ನೀವು ಪವಿತ್ರ ಇಲ್ಲವೇ ಆಕೆಯ ತಂಗಿಯ ಬಾಹ್ಯರೂಪಕ್ಕೆ ಮಾತ್ರ ಬೆಲೆ ಕೊಡುತ್ತಿದ್ದೀರಿ.

ನಿಮ್ಮದು ಪ್ರೀತಿ ಅಲ್ಲ. ಕೇವಲ ಆಕರ್ಷಣೆ ಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ನಿಮ್ಮ ಮನಸ್ಸಿನಿಂದ ಹಾಗೂ ನಿಷ್ಕಲ್ಮಶ ಪ್ರೀತಿಯಿಂದ ಯೋಚನೆ ಮಾಡಿ ಒಂದು ಸೂಕ್ತ ನಿರ್ಧಾರಕ್ಕೆ ಬನ್ನಿ. ಮೋಹದ ಬಲೆಯಲ್ಲಿ ಪವಿತ್ರ ಪ್ರೀತಿಗೆ ಅಪಮಾನ ಮಾಡಬೇಡಿ.


ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments