ಪತ್ನಿ ರಾತ್ರಿಯಾದರೆ ಖ್ಯಾತೆ ತೆಗೆಯುತ್ತಾಳೆ

ಭಾನುವಾರ, 4 ಆಗಸ್ಟ್ 2019 (17:38 IST)
ಪ್ರಶ್ನೆ: ಮಾನ್ಯರೆ, ಈ ಪತ್ರ ಬರೆಯುವ ಉದ್ದೇಶವೇನೆಂದರೆ, ನಾನು ಸಂಸಾರಿಯಾಗಿದ್ದರೂ ತುಂಬಾ ಗೊಂದಲದಲ್ಲಿದ್ದೇನೆ. ನನಗೆ ಮದುವೆಯಾಗಿದ್ದರೂ ಆಗಂದತಹ ಅನುಭವ ಆಗುತ್ತಿದೆ. ಏಕೆಂದರೆ ಪ್ರತಿ ರಾತ್ರಿ ನಾನು ನನ್ನ ಪತ್ನಿ ಜತೆ ಒಂದಾಗುವಾಗ ಅವಳು ಏನೇನೋ ಕಾರಣ ಹೇಳ್ತಾಳೆ.  ಆದರೆ ನನ್ನ ಸಮಸ್ಯೆ ಏನಂದರೆ ಮೊದಲ ಸಲದ ಮಿಲನದ ಸಂದರ್ಭದಲ್ಲಿ ನಾನು ಬೇಗ ಔಟ್ ಆಗುತ್ತಿರುವೆ. ಎರಡನೇ ಪ್ರಯತ್ನಕ್ಕೆ ಪತ್ನಿ ಸಹಕಾರ ನೀಡುತ್ತಿಲ್ಲ ಏನು ಮಾಡಲಿ?

ಉತ್ತರ: ನೀವು ನಿಮ್ಮ ಹಾಗೂ ನಿಮ್ಮ ಪತ್ನಿಯ ವಯಸ್ಸನ್ನು ತಿಳಿಸಿಲ್ಲ. ಮಕ್ಕಳ ಬಗ್ಗೆ ಸ್ಪಷ್ಟವಾಗಿ ಏನೂ ಬರೆದಿಲ್ಲ. ಮದುವೆಯಾಗಿ ಮಕ್ಕಳಾಗಿಲ್ಲವೆಂದರೆ ಮಕ್ಕಳಿಗಾಗಿ ನೀವು ಕೇವಲ ಒಂದು ಬಾರಿ ಸೇರಿ ಸುಖಿಸಿದರೆ ಸಾಲುವುದಿಲ್ಲ.

ಇನ್ನು ನಿಮ್ಮಾಕೆಯ ದೈಹಿಕ ಸಮರ್ಥತೆ, ಆಕೆ ಔಷಧ ತೆಗೆದುಕೊಳ್ಳುತ್ತಿದ್ದರೆ ಅಥವಾ ಈ ಮುಂಚೆ ಯಾವುದಾದರೂ ಆಪರೇಷನ್ ಮತ್ತಿತರ ವಿವರಗಳು ಸ್ಪಷ್ಟವಾಗಿಲ್ಲ. ಒಂದು ವೇಳೆ ಯಾವ ಸಮಸ್ಯೆ ಇಲ್ಲದಿದ್ದರೂ ಆಕೆ ಹೀಗೆ ಮಾಡುತ್ತಿದ್ದಾಳೆ ಎಂದರೆ ವೈದ್ಯರನ್ನು ಭೇಟಿ ಯಾಗಿ ಸೂಕ್ತ ಸಲಹೆ ಕೊಡಿಸಿ.

ಬಲವಂತದಿಂದ ಕೂಡುವ ಬದಲು ಪ್ರೀತಿಯಿಂದ ಕೂಡುವಂತೆ ಮಾಡಿ. ಆಕೆಗೆ ಆ ಕುರಿತು ಅರಿವು, ತಿಳಿವಳಿಕೆಯನ್ನು ಮೂಡಿಸಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಾವ ಕುಡುಕ ಅಂತ ಅಳಿಯನೊಂದಿಗೆ ಅತ್ತೆ ಹೀಗಾ ಮಾಡೋದು?